ಮೀನುಗಾರ ನಾಪತ್ತೆ

Update: 2021-10-26 16:31 GMT

ಮಂಗಳೂರು, ಅ.26: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ತಮಿಲ್ನಾಡಿನ ವೆಲ್ ಮುರುಗನ್ (24) ನಾಪತ್ತೆಯಾದ ಮೀನುಗಾರ. ಕಳೆದ 4 ತಿಂಗಳಿನಿಂದ ಇವರು ಅಲ್ಕೌಸರ್ ಎಂಬ ಬೋಟಿನಲ್ಲಿ ದುಡಿಯುತ್ತಿದ್ದು, ಅ.24ರಂದು ರಾತ್ರಿ 10:30ಕ್ಕೆ 10 ಮಂದಿಯೊಂದಿಗೆ ಮಿೀನುಗಾರಿಕೆಗೆ ತೆರಳಿದ್ದರು.

ರಾತ್ರಿ 11:15ಕ್ಕೆ ಬೋಟಿನಲ್ಲಿ ವೆಲ್ ಮುರುಗನ್ ಏಕಾಏಕಿ ಕಾಣೆಯಾಗಿದ್ದು, ತಕ್ಷಣ ಸಮುದ್ರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News