ನೋಟ್‌ ಬುಕ್, ಸಮವಸ್ತ್ರ ನಿರ್ದಿಷ್ಟ ಅಂಗಡಿಗಳಿಂದ ಖರೀದಿ; ಹೆತ್ತವರ ಮೇಲೆ ಒತ್ತಡ ಹೇರದಂತೆ ದ.ಕ. ಡಿಸಿ ಆದೇಶ

Update: 2021-10-26 16:52 GMT

ಮಂಗಳೂರು, ಅ.26: ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ನೋಟ್‌ಬುಕ್/ಸಮವಸ್ತ್ರಗಳನ್ನು ಪೋಷಕರು ಯಾವುದೇ ಅಂಗಡಿ ಗಳಿಂದ ಖರೀದಿಸಲು ಸ್ವತಂತ್ರರಾಗಿದ್ದಾರೆ. ಯಾವುದೇ ಕಾರಣಕ್ಕೂ ನಿರ್ದಿಷ್ಟ ಅಂಗಡಿಗಳಿಂದಲೇ ಖರೀದಿಸಲು ಸೂಚಿಸುವಂತಿಲ್ಲ ಎಂದು ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಅಂಗಡಿಗಳಿಂದಲೇ ನೋಟ್‌ಬುಕ್, ಲೇಖನ ಸಾಮಗ್ರಿ, ಸಮವಸ್ತ್ರ ಖರೀದಿಸಬೇಕು ಎಂದು ಒತ್ತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದೆ. ಇದು ಶಿಕ್ಷಣ ಇಲಾಖೆಯ ನಿರ್ದೇಶನಗಳಿಗೆ ವಿರುದ್ಧ ವಾಗಿದೆ. ಆದಾಗ್ಯೂ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಒತ್ತಡ ಹೇರಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಈ ಬಗ್ಗೆ ದೂರುಗಳಿದ್ದರೆ ಡಿಡಿಪಿಐ ಅಥವಾ ಬಿಇಒ ಅವರಿಗೆ ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News