​ಪ್ರಕಾಶ್ ಝಾ ಚಿತ್ರ ತಂಡದ ಮೇಲಿನ ದಾಳಿಗೆ ಖಂಡನೆ

Update: 2021-10-26 17:20 GMT

ಮಂಗಳೂರು, ಅ.26: ಖ್ಯಾತ ಚಿತ್ರ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶಿಸುತ್ತಿರುವ ಹಾಗೂ ಖ್ಯಾತ ನಟ ಸನ್ನಿ ದಿಯೊಲ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ವೆಬ್ ಸರಣಿ ಆಶ್ರಮ್ 3ರ ಶೂಟಿಂಗ್ ವೇಳೆಗೆ ದುರ್ಷ್ಕುಗಳ ತಂಡವೊಂದು ಫಿಲ್ಮ್ ಯುನಿಟ್ ಮೇಲೆ ದಾಳಿ ನಡೆಸಿ ಸಾಮಾಗ್ರಿಗಳನ್ನು ಹಾಳುಗೆಡಹಿದ ಕೃತ್ಯವನ್ನು ಸಮುದಾಯದ ವಾಸುದೇವ ಉಚ್ಚಿಲ್ ಖಂಡಿಸಿದ್ದಾರೆ.

ಬಜರಂಗ ದಳದ ಕಾರ್ಯಕರ್ತರು ಎನ್ನಲಾದ ತಂಡವು ಪ್ರಕಾಶ್ ಝಾ ಅವರ ಮೇಲೆ ಶಾಯಿ ಎರಚಿದೆ. ಯೂನಿಟಿನ ಎರಡು ವಾಹನಗಳ ಗಾಜು ಒಡೆಯಲಾಗಿದೆ. ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲಾಗಿದೆ. ಹಲ್ಲೆಕೋರರು ಪ್ರಕಾಶ್ ಝಾ ಮತ್ತು ಸನ್ನಿ ದಿಯೊಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ತಮ್ಮ ಚಿಂತನೆಗೆ ಒಗ್ಗದ ಕಲಾವೊಂದರ ಸೃಜನಶೀಲ ಚಟುವಟಿಕೆಗಳ ಮೇಲೆ ದಾಳಿ ನಡೆಸುವ ಭಜರಂಗದಳದ ದಾಳಿ ಖಂಡನೀಯ. ಬಜರಂಗ ದಳದ ಕ್ರಿಮಿನಲ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮುದಾಯ ಆಗ್ರಹಿಸಿದೆ.        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News