ಉದ್ಯಾವರ ಗ್ರಾಪಂಗೆ ಖಾಯಂ ಪಿಡಿಓ ನೇಮಕಕ್ಕೆ ಆಗ್ರಹಿಸಿ ಧರಣಿ

Update: 2021-10-26 17:43 GMT

ಉಡುಪಿ, ಅ.26: ಉದ್ಯಾವರ ಗ್ರಾಪಂಗೆ ಖಾಯಂ ಪಿಡಿಓ ನೇಮಕ ಮಾಡು ವಂತೆ ಆಗ್ರಹಿಸಿ ಹಾಗೂ ಗ್ರಾಮಸ್ಥರನ್ನು ನಿರ್ಲಕ್ಷಿಸಿ ರುವ ಗ್ರಾಪಂ ಆಡಳಿತದ ವಿರುದ್ಧ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಉದ್ಯಾವರ ಮೇಲ್ಪೇಟೆಯಲ್ಲಿರುವ ಪಕ್ಷದ ಕಛೇರಿಯಿಂದ ಗ್ರಾಪಂ ಕಛೇರಿಯ ವರೆಗೆ ಪ್ರತಿಭಟನಾ ಜಾಥ ನಡೆಸಲಾಯಿತು. ಬಳಿಕ ಅಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಪು ಕ್ಷೇತ್ರದ 10 ಗ್ರಾಪಂಗಳಲ್ಲಿ ಖಾಯಂ ಪಿಡಿಒ ಇಲ್ಲ. ಇತ್ತೀಚೆಗೆ 5 ಮಂದಿ ಪಿಡಿಓಗಳನ್ನು ಕಾರ್ಕಳಕ್ಕೆ ವರ್ಗಾವಣೆ ಮಾಡಲಾಗಿದೆ. ಜನಸಾಮಾನ್ಯರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವ ಗ್ರಾಪಂ ವ್ಯವಸ್ಥೆಯಲ್ಲಿ ಉದ್ಯಾವರ ಗ್ರಾಪಂಗೆ ಬೀಗ ಜಡಿುುವ ಸ್ಥಿತಿ ಬಂದಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಲಾರೆನ್ಸ್ ಡಿಸೋಜ, ಕಾಂಗ್ರೆಸ್ ಮುಖಂಡ ರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ನವೀನ್‌ ಚಂದ್ರ ಸುವರ್ಣ, ಬೆಳ್ಳೆ ಶಿವಾಜಿ ಸುವರ್ಣ, ಉದ್ಯಾವರ ನಾಗೇಶ್ ಕುಮಾರ್, ಸುಗಂಧಿ ಶೇಖರ್, ಪ್ರಭಾ ಬಿ. ಶೆಟ್ಟಿ, ಗಿರೀಶ್ ಕುಮಾರ್, ರಾಯ್ಸಿ ಫೆರ್ನಾಂಡಿಸ್, ಶೇಖರ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News