ಕ್ರೂಸ್ ಡ್ರಗ್ಸ್ ಪಾರ್ಟಿಗೆ ಸಂಘಟಕರು ಕೇಂದ್ರದಿಂದ ಅನುಮತಿ ಪಡೆದಿದ್ದರು:ಮಹಾರಾಷ್ಟ್ರ ಸಚಿವ ಮಲಿಕ್

Update: 2021-10-27 13:14 GMT

ಮುಂಬೈ: ಕಾರ್ಡೆಲಿಯಾ ಕ್ರೂಸ್ "ಡ್ರಗ್ಸ್ ಪಾರ್ಟಿ" ಸಂಘಟಕರು ಕೇಂದ್ರದ "ಡೈರೆಕ್ಟರೇಟ್ ಆಫ್ ಶಿಪ್ಪಿಂಗ್" ನಿಂದ ನೇರವಾಗಿ ಅನುಮತಿ ಪಡೆದಿದ್ದಾರೆಯೇ ಹೊರತು ರಾಜ್ಯ ಪೊಲೀಸ್ ಅಥವಾ ರಾಜ್ಯ ಗೃಹ ಇಲಾಖೆಯಿಂದಲ್ಲ ಎಂದು ಮಹಾರಾಷ್ಟ್ರ ಸಚಿವ ಹಾಗೂ  ಎನ್‌ಸಿಪಿ ನಾಯಕ ನವಾಬ್ ಮಲಿಕ್ ಬುಧವಾರ ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ಅದೇ ಕ್ರೂಸ್‌ನಲ್ಲಿ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಸದಸ್ಯರೊಬ್ಬರು ಇದ್ದರು ಹಾಗೂ  ಆದರೆ ಈ ತಿಂಗಳ   ಆರಂಭದಲ್ಲಿ ಈ ಹಡಗಿನ ಮೇಲೆ ದಾಳಿ ನಡೆಸಿದ ನಂತರ ಕೆಲವರನ್ನು ಬಂಧಿಸಲಾಗಿದ್ದು, ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಸದಸ್ಯ ಹೇಗೆ ಪಾರಾದ ಎಂದು ಪ್ರಶ್ನಿಸಿದರು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ  ಇತರ ಕೆಲವರನ್ನು ಬಂಧಿಸಲಾಯಿತು.

ಮಲಿಕ್ ಅವರು ಕ್ರೂಸ್ ಡ್ರಗ್ ಜಾಲ ಬಯಲಿಗೆ ತಂದಿರುವ  ಪ್ರಕರಣವನ್ನು 'ನಕಲಿ' ಎಂದು ಪದೇ ಪದೇ ಕರೆದಿದ್ದಾರೆ. ದಾಳಿಯ ನೇತೃತ್ವ ವಹಿಸಿದ್ದ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸರಮಾಲೆಯನ್ನು ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News