ಅಂತರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆಗೆ ತಾಲಿಬಾನ್ ಉತ್ಸುಕ: ಚೀನಾ

Update: 2021-10-27 18:24 GMT

ಬೀಜಿಂಗ್, ಅ.27: ಅಂತರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆ ನಡೆಸಲು ತಾಲಿಬಾನ್ ಉತ್ಸುಕವಾಗಿದೆ ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದ್ದಾರೆ.

ಇರಾನ್‌ನಲ್ಲಿ ಆಯೋಜಿಸಿದ್ದ ಸಮಾವೇಶವೊಂದರಲ್ಲಿ ವರ್ಚುವಲ್ ವೇದಿಕೆಯ ಮೂಲಕ ಪಾಲುಗೊಂಡು ಮಾತನಾಡಿದ ಅವರು, ತಾಲಿಬಾನ್ ವಿಶ್ವದ ಸದಸ್ಯರೊಂದಿಗೆ ಮಾತುಕತೆಗೆ ಉತ್ಸುಕವಾಗಿದೆ. ಈ ಮಾತುಕತೆ ಸೂಕ್ತ ಸಮಯದಲ್ಲಿ ಚೀನಾದ ಆತಿಥೇಯತ್ವದಲ್ಲಿ ನಡೆಯಲಿದೆ ಎಂದವರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಅಭಿವೃದ್ಧಿಗೆ ನೆರವಾಗುವಂತೆ ಅವರು ಇದೇ ವೇಳೆ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News