ಕಾರ್ಕಳ: 'ಮಾತಾಡ್ ಮಾತಾಡ್ ಕನ್ನಡ' ಗಾಯನ ಕಾರ್ಯಕ್ರಮ

Update: 2021-10-28 09:50 GMT

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದರ ಆಶ್ರಯದಲ್ಲಿ 'ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ, ಮಾತಾಡ್ ಮಾತಾಡ್ ಕನ್ನಡ' ವಿಶ್ವದಾದ್ಯಂತ ಏಕ ಕಾಲದ ಕನ್ನಡ ಗೀತ ಗಾಯನ ಕಾರ್ಯಕ್ರಮ ಕಾರ್ಕಳದಾದ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಕಳ ಇತಿಹಾಸ ಪ್ರಸಿದ್ಧ ವೈರಾಗ್ಯ ಮೂರ್ತಿ ಬಹುಬಲಿ ಬೆಟ್ಟದ ಗೋಮಟೇಶ್ವರ ಬಳಿ ಕಾರ್ಕಳ ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಕೆ ಪುರಂದರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಸಂದರ್ಭದಲ್ಲಿ ಕಾರ್ಕಳ ಉಪ ತಹಶೀಲ್ದಾರ್, ಕಂದಾಯ ಅಧಿಕಾರಿ ಶಿವಪ್ರಸಾದ್, ಗ್ರಾಮ ಕರಣಿಕ ರಿಯಾಝ್, ಕಚೇರಿ ಸಹಾಯಕ ಸಿಂಬ್ಬಂದಿ ಮಾಧವ , ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಪುರಸಭಾ ಸದಸ್ಯರು, ವಿವಿದ  ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಖ್ಯಾತ ಸಾಹಿತಿ ಮುನಿರಾಜ ರೆಂಜಾಳ, ಪುರಸಭಾ ಹಿರಿಯ ಆರೋಗ್ಯಾಧಿಕಾರಿ ಲೈಲಾ ತೋಮಸ್, ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಜಗನ್ನಾಥ ಶೆಟ್ಟಿ, ಬಿಜೆಪಿ ಪಕ್ಷದ ಅಧ್ಯಕ್ಷ ಮಹಾವೀರ್ ಜೈನ್ , ಸ್ವಚ್ಛ ಭಾರತ್ ಬ್ರಿಗೇಡ್ ನ ಪದಾಧಿಕಾರಿಗಳು, ಬಜೆಪಿ ಮುಖಂಡರಾದ ಪ್ರಕಾಶ  ರಾವ್, ನರಸಿಂಹ ಕಾಮತ್, ಪುರಸಭಾ ಸದಸ್ಯರಾದ ಪ್ರದೀಪ್ ಕಾಳಿಕಾಂಬ, ಅವಿನಾಶ್ ಶೆಟ್ಟಿ, ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಕಳದ ಸಚಿವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಸಿದ್ಧ ಗಾಯಕ ಯೋಗಿಶ್ ಕಿಣಿಯವರ ಮಧುರ ಕಂಠಕ್ಕೆ ಸಾಥ್ ನೀಡಿದ ಮಹಿಳಾ ಹಾಡುಗಾರರು ಸಂಗೀತದ ರಸದೌತಣ ಉಣ ಬಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸ್ಥಾಯಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಸುಮಿತ್ ಶೆಟ್ಟಿ, ಸದಸ್ಯರಾದ ರೇಶ್ಮ ಶೆಟ್ಟಿ, ಕಾರ್ಕಳ ಬಿಜೆಪಿ ಅಧ್ಯಕ್ಷ ಅನಂತ ಕೃಷ್ಣ ಶಣೈ, ನವೀನ್ ನಾಯ್ಕ‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸದಸ್ಯರಾದ ನೀತಾ ಆಚಾರ್ಯ, ರಾಕೇಶ್ ಶೆಟ್ಟಿ, ಭರತ್ ಶೆಟ್ಟಿ, ಯುವರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಕಳ ಬಸ್ ನಿಲ್ದಾಣ, ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್, ಇತರ ಶಾಲೆ, ಕಾಲೇಜುಗಳಲ್ಲಿ ಸುಗಮವಾಗಿ ಸಂಗೀತದ ಸಾಲುಗಳು ಹರಿದು ಬಂದವು. ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News