ಅ. 30ರಂದು ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಬಿಐಟಿ, ಬೀಡ್ಸ್ ಪದವಿ ಸಮಾರಂಭ

Update: 2021-10-28 13:27 GMT

ಮಂಗಳೂರು, ಅ.28: ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಅ. 30ರಂದು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 9ನೆ ಹಾಗು  ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್)ನ 2ನೆ ಪದವಿ ಸಮಾರಂಭ ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಸಮಾರಂಭ ಆರಂಭಗೊಳ್ಳಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಿಐಟಿ ಪ್ರಾಂಶುಪಾಲ ಡಾ. ಎಸ್.ಐ. ಮಂಜುರ್ ಬಾಷಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದು, ಎನ್‌ಟಿಟಿ ಗ್ಲೋಬಲ್ ಲಿಮಿಟೆಡ್‌ನ ಸಿಇಒ ಶರದ್ ಸಂಘಿ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಎನ್‌ಐಟಿಕೆ ನಿರ್ದೇಶಕ ಡಾ. ಉಮಾಮಹೇಶ್ವರ ರಾವ್, ಶಾಸಕ ಯು.ಟಿ. ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಆರ್ಕಿಟೆಕ್ಟ್ ಎನ್.ಎಂ. ಸಲೀಮ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಪದವಿ ಸಮಾರಂಭದಲ್ಲಿ 2017ನೆ ಬ್ಯಾಚ್‌ನ ಪದವೀಧರರು ಮತ್ತು 2019ರ ಬ್ಯಾಚ್‌ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರನ್ನು ಸನ್ಮಾನಿಸಲಾಗುವುದು. ಪದವೀಧರರು ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ ಮತ್ತು ಇಸಿಇ. ಎರಡನೆ ಬ್ಯಾಚ್‌ನ ಆರ್ಕಿಟೆಕ್ಚರ್, ಡಿಪ್ಲೊಮಾ, ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ ಮತ್ತು ಇಸಿಇ ಮತ್ತು ಡಿಪ್ಲೊಮಾ ಸಿವಿಲ್ ಮತ್ತು ಮೆಕ್ಯಾನಿಕಲ್‌ನ ಶೈಕ್ಷಣಿಕ ಟಾಪರ್ ಮತ್ತು ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಬೀಡ್ಸ್ ಪ್ರಾಂಶುಪಾಲ ಆರ್ಕಿಟೆಕ್ಟ್ ಅಶೋಕ್ ಎಲ್. ಮೆಂಡೋನ್ಸಾ, ಬಿಐಟಿ- ಪಾಲಿಟೆಕ್ನಿಕ್ ನಿರ್ದೇಶಕ ಡಾ. ಅಝೀಝ್ ಮುಸ್ತಫಾ, ಬಿಐಟಿ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News