ಅ.29ರಿಂದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ

Update: 2021-10-28 11:00 GMT

ಮಂಗಳೂರು, ಅ.28: ಕರಾವಳಿ ಚಿತ್ರಕಲಾ ಚಾವಡಿ ವತಿಯಿಂದ ಅ.29ರಿಂದ ನ.7ರವರೆಗೆ ನಗರದ ಬಳ್ಳಾಲ್‌ಬಾಗ್‌ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ‘ವಾರಿಯರ್ಸ್‌ ಆಫ್ ದಿ ಬ್ಲೂ’ ಹೆಸರಿನಡಿ ಮೀನುಗಾರರ ಬದುಕನ್ನು ಬಿಂಬಿಸುವ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಡಾ.ಪ್ರವೀಣ್ ಪುತ್ರ ಹಾಗೂ ಅವರ ಪುತ್ರಿ ಪ್ರಾವ್ಯ ರಚಿಸಿರುವ 30ಕ್ಕೂ ಅಧಿಕ ಚಿತ್ರಕಲೆಯನ್ನು ಪ್ರದರ್ಶನಕ್ಕಿಡಲಾಗುವುದು. ಅ.29ರ ಸಂಜೆ 5.15ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕ್ಯಾಪ್ಟನ್ ವಿ.ಎ.ಪುತ್ರನ್ ಉದ್ಘಾಟನೆ ನೆರವೇರಿಸುವರು. ಮೇಯರ್ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.

ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಾರ್ವಜನಿಕರಿಗೆ ಚಿತ್ರಕಲೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೀನುಗಾರಿಕೆ ಮೂಲಕವೇ ಬದುಕನ್ನು ಕಂಡುಕೊಂಡಿರುವ ಮೀನುಗಾರರ ಬದುಕಿನ ಚಿತ್ರಣ ಸೇರಿದಂತೆ ಮೀನುಗಾರಿಕೆಯ ವಿವಿಧ ಆಯಾಮಗಳ ಆಕರ್ಷಕ ಕಲಾಕೃತಿಗಳು ಪ್ರದರ್ಶನದಲ್ಲಿರಲಿವೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಡಾ.ಪ್ರವೀಣ್ ಪುತ್ರ, ವಿನಯ ಪ್ರವೀಣ್, ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ್ ಸೋಮಯಾಜಿ, ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News