ಕುಂದಾಪುರ: ಹಲ್ಲಿನ ಸ್ವಚ್ಛತೆ,ಬಾಯಿಯ ಆರೋಗ್ಯ ಮಾಹಿತಿ ಕಾರ್ಯಕ್ರಮ- ಕಿಟ್ ವಿತರಣೆ

Update: 2021-10-28 11:19 GMT

ರೋಟರಿ ಕ್ಲಬ್ ಕುಂದಾಪುರ ಮತ್ತು ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ  ಹಲ್ಲಿನ ಸ್ವಚ್ಛತೆ ಮತ್ತು ಬಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ದಂತ ಸ್ವಚ್ಛತಾ ಕಿಟ್ ವಿತರಣಾ ಕಾರ್ಯಕ್ರಮ ಬುಧವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ರೊಟೇರಿಯನ್ ಡಾ. ರಾಜಾರಾಂ ಶೆಟ್ಟಿ, ದಂತ ವೈದ್ಯರು ಮಾರಲ ಡೆಂಟಲ್ ಕ್ಲಿನಿಕ್ ಕುಂದಾಪುರ ಇವರು ಮಾಹಿತಿಯನ್ನು ನೀಡಿದರು. ವಿಶೇಷ ಮಕ್ಕಳಲ್ಲಿ ಹಲ್ಲಿನ, ಬಾಯಿಯ ಆರೋಗ್ಯದ ಮಹತ್ವ ಮತ್ತು ಹಲ್ಲುಜ್ಜುವ ಸರಿಯಾದ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಶಶಿಧರ್ ಹೆಗ್ಡೆ ವಿಶೇಷ ಮಕ್ಕಳ ಪಾಲನೆಯಲ್ಲಿ ಫೋಷಕರು ಅತ್ಯಂತ ತಾಳ್ಮೆ ಮತ್ತು ಕಾಳಜಿಯಿಂದ ಬೆಳೆಸಬೇಕು ಎಂದರು ಮತ್ತು ರೋಟರಿ ಕ್ಲಬ್ ಕುಂದಾಪುರ ಇಂತಹ ಕಾರ್ಯಗಳಿಗೆ ಸದಾ ಬೆಂಬಲವನ್ನು ನೀಡಲಿದೆ ಎಂಬ ಭರವಸೆಯನ್ನು ನೀಡಿದರು.

ಮುಖ್ಯ ಅತಿಥಿಯಾದ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭೀಮವ್ವ ಪಂಚಾಯತ್ ಮೂಲಕ ವಿಶೇಷ ಮಕ್ಕಳಿಗೆ ದೂರೆಯುವಸವಲತ್ತುಗಳನ್ನು ದೂರಕಿಸಿ ಕೊಡುವಲ್ಲಿ ಪ್ರಯತ್ನವನ್ನು ನಡೆಸುವುದರೊಂದಿಗೆ ಸಂಸ್ಥೆಯ ಚಟುವಟಿಕೆಗಳನ್ನು ಪ್ರಶಂಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಇದರ ಕಾರ್ಯದರ್ಶಿ ಕುಮಾರ್ ಕಾಂಚನ್, ಸಂಸ್ಥೆಯ ಹಿತೈಷಿಗಳಾದ ನಿವೃತ್ತ ಕಸ್ಟಮ್ಸ್ ಮತ್ತು ಜಿ.ಎಸ್.ಟಿ ಇದರ ಅಸಿಸ್ಟೆಂಟ್ ಕಮಿಷನರ್ ಪ್ರಭಾತ್ ಶೆಟ್ಟಿ ಉಪಸ್ಥಿತರಿದ್ದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಸ್ವಾಗತಿಸಿ, ಸಹ ಶಿಕ್ಷಕಿ ಶ್ರುತಿ ವಂದಿಸಿದರು. ಸಹ ಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News