ಮಂಗಳೂರು : 'ದಿ ಆಲಿವ್ ರೆಸ್ಟೋರೆಂಟ್' ಶುಭಾರಂಭ

Update: 2021-10-28 12:09 GMT

ಮಂಗಳೂರು : ನಗರದ ಲಾಲ್‌ಬಾಗ್ ಸಮೀಪದ ಕರಾವಳಿ ಉತ್ಸವ ಮೈದಾನದೆದುರು ಲೇಡಿಹಿಲ್ ರಸ್ತೆಯ ಮೂರನೆ ಕ್ರಾಸ್‌ನಲ್ಲಿ ‘ದಿ ಆಲಿವ್ ರೆಸ್ಟೋರೆಂಟ್' ಉದ್ಘಾಟನೆ ಗುರುವಾರ ಸಂಜೆ  ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕರಾದ ರಾಜೇಶ್ ನಾಯ್ಕ್, ‘ದಿ ಆಲಿವ್’ ಗ್ರೂಪ್‌ನ ಅಧ್ಯಕ್ಷ ಶಾಹಿದ್ ಕಲ್ಲಿಕೋಟೆ ಹಾಗೂ ಕುಟುಂಬದ ಹಿರಿಯ ಸದಸ್ಯರಾದ ಫಾತಿಮಾ ರೆಹಾ ಹಾಗೂ ಇತರರು ಉಪಸ್ಥಿತರಿದ್ದರು.

ರೆಸ್ಟೋರೆಂಟ್ ಕ್ಷೇತ್ರದಲ್ಲಿ ಸುಮಾರು 14 ವರ್ಷಗಳ ಅನುಭವವಿರುವ ಕೇರಳ ಮೂಲದ ‘ದಿ ಆಲಿವ್’ ಗ್ರೂಪ್ ತಿರುವನಂತಪುರಂನಲ್ಲಿ ಎರಡು, ಬಹರೈನ್, ದುಬೈ, ಎರ್ನಾಕುಳಂ, ಕಲ್ಲಿಕೋಟೆ, ಬೆಂಗಳೂರಿನಲ್ಲಿ ತಲಾ ಒಂದೊಂದು ರೆಸ್ಟೋರೆಂಟ್ ಹೊಂದಿದೆ. ಇದೀಗ ಆಲಿವ್ ರೆಸ್ಟೋರೆಂಟ್ ಮಂಗಳೂರಿನಲ್ಲಿ ಆರಂಭಗೊಂಡಿದೆ. ಇನ್ನೊಂದು ರೆಸ್ಟೋರೆಂಟ್ ಮುಂಬೈಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ದಿ ಆಲಿವ್ ಗ್ರೂಪ್ ನ ಅಧ್ಯಕ್ಷ ಶಾಹಿದ್ ತಿಳಿಸಿದ್ದಾರೆ.

ಬಹುವಿಧದ ಖಾದ್ಯ, ಸೀಫುಡ್ ಗೆ ಹೆಸರಾದ ‘ದಿ ಆಲಿವ್ ರೆಸ್ಟೋರೆಂಟ್’ನಲ್ಲಿ 800ಕ್ಕೂ ಅಧಿಕ ವಿಶೇಷ ಆಹಾರ ಖಾದ್ಯ, ವಿವಿಧ ಬಗೆಯ ಮತ್ಸ್ಯ ಖಾದ್ಯಗಳು, ಅರೆಬಿಕ್, ಇರಾನಿಯನ್, ಚೈನೀಸ್ ಮತ್ತು ಐರೋಪ್ಯ ದೇಶಗಳ ಖಾದ್ಯಗಳು ಲಭ್ಯವಿದೆ. ಏಕಕಾಲದಲ್ಲಿ ಸುಮಾರು 250ರಷ್ಟು ಗ್ರಾಹಕರಿಗೆ ಉಪಹಾರ ಸೇವಿಸುವ ಸ್ಥಳಾವಕಾಶ ಇದೆ. ಸಾಂಪ್ರಾದಾಯಿಕ ಹಟ್ ಮಾದರಿಯ ಈ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಹಾಲ್‌ಗೆ ಸ್ಥಳಾವಕಾಶವಿದೆ. ಅಲ್ಲದೆ ಕಾರು ಪಾರ್ಕಿಂಗ್ ವ್ಯವಸ್ಥೆಯೂ ಇದೆ ಎಂದು ‘ದಿ ಆಲಿವ್’ ಗ್ರೂಪ್‌ನ ಅಧ್ಯಕ್ಷ ಶಾಹಿದ್ ಶಾಜಿ ಕಲ್ಲಿಕೋಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News