ಉಡುಪಿ: ರಾಜಾಂಗಣದಲ್ಲೂ ಮೊಳಗಿತು ಕನ್ನಡ ಹಾಡುಗಳು
Update: 2021-10-28 19:35 IST
ಉಡುಪಿ, ಅ.28: ರಾಜ್ಯೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲ ಕಾಲದಲ್ಲಿ ನಡೆದ ಮೂರು ಕನ್ನಡ ಹಾಡುಗಳ ಸಮೂಹ ಗಾಯನ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲೂ ನಡೆಯಿತು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸಮೂಹ ಗಾಯನದಲ್ಲಿ ನಾಡಗೀತೆ, ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸ್ಸಾರ್ ಅಹ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ಏಕಕಂಠದಲ್ಲಿ ಹಾಡಿದರು.