ದ.ಕ. ಜಿಲ್ಲೆ: ಕೋವಿಡ್‌ಗೆ ನಾಲ್ವರು ಬಲಿ, 31 ಮಂದಿಗೆ ಕೊರೋನ ಸೋಂಕು

Update: 2021-10-28 14:38 GMT

ಮಂಗಳೂರು, ಅ.28: ದ.ಕ. ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿಗೆ ನಾಲ್ವರು ಬಲಿಯಾಗಿದ್ದು, 31 ಮಂದಿಗೆ ಕೊರೋನ ಸೋಂಕು ತಗುಲಿದೆ. 29 ಮಂದಿ ಗುಣಮುಖರಾಗಿದ್ದಾರೆ.

ಪಾಸಿಟಿವಿಟಿ ದರ ಶೇ.0.39 ದಾಖಲಾಗಿದೆ. 1,15,398 ಸೋಂಕಿತರ ಪೈಕಿ 1,13,444 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ 1685 ಮಂದಿ ಮೃತಪಟ್ಟಿದ್ದಾರೆ. ಸದ್ಯ 269 ಸಕ್ರಿಯ ಪ್ರಕರಣಗಳಿವೆ.

ದ.ಕ. ಜಿಲ್ಲೆಯಲ್ಲಿ 88,441 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 1,07,37,070 ರೂ. ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News