ಗ್ಯಾಸ್ ಲೈಟರ್ ಬಳಸಿ ಸಿಡಿಸುವ ಪರಿಸರ ಸ್ನೇಹಿ ಪಟಾಕಿ

Update: 2021-10-28 16:44 GMT

ಉಡುಪಿ, ಅ.28: ಈ ಬಾರಿಯ ದೀಪಾವಳಿಗೆ ಗ್ಯಾಸ್ ಲೈಟರ್ ಬಳಸಿ ಸಿಡಿಸುವ ಪರಿಸರ ಸ್ನೇಹಿ ಪಟಾಕಿಯನ್ನು ಪರ್ಕಳದಲ್ಲಿ ಸಿದ್ಧಪಡಿಸಲಾಗಿದೆ.

ನಳ್ಳಿ ನೀರಿಗೆ ಬಳಸುವ ಪಿವಿಸಿ ಪೈಪ್ ಮೂಲಕ ವಿಶೇಷ ವಿನ್ಯಾಸದ ಪರಿಸರ ಸ್ನೇಹಿಯಾದ ಹೊಗೆರಹಿತ ಪಟಾಕಿ ಇದಾಗಿದೆ. ಪಿವಿಸಿ ಪೈಪ್‌ಗಳನ್ನು ಜೋಡಿಸಿ ನಂತರ ಹಿಂಬದಿಯ ಕ್ಯಾಪ್ ಮುಂಭಾಗದಲ್ಲಿ ಸಣ್ಣ ರಂಧ್ರ ಕೊರೆಯಲಾಗುತ್ತದೆ. ಅದಕ್ಕೆ ಗ್ಯಾಸ್ ವೆಲ್ಡಿಂಗ್ ಬಳಸಬಹುದಾದ ಕಾರ್ಬೆಡ್‌ನ್ನು ಸಣ್ಣ ಪುಡಿ ಮಾಡಿ ಹಾಕಬೇಕು. ಪಿವಿಸಿ ಪೈಪ್‌ನ ಮುಂಭಾಗದಲ್ಲಿ ಮೊದಲೇ ಕಾಗದದ ಉಂಡೆ ಗಳನ್ನು ಮಾಡಿ ಇಟ್ಟುಕೊಳ್ಳಬೇಕು.

ನಂತರ ಸಣ್ಣ ಬಾಟಲಿಯಲ್ಲಿ ರಂಧ್ರದ ಮೂಲಕ ನೀರು ಚಿಮುಕಿಸಬೇಕು. ನಂತರ ರಂಧ್ರಕ್ಕೆ ಗ್ಯಾಸ್ ಲೈಟರ್ ಮೂಲಕ ಸ್ಪಾರ್ಕ್ ಮಾಡಬೇಕು. ತಕ್ಷಣವೇ ಹೊಗೆರಹಿತ ಶಬ್ದ ಉಂಟು ಮಾಡಿ ಎಲ್ಲರನ್ನು ಚಕಿತಗೊಳಿಸುತ್ತದೆ. ಇವುಗಳನ್ನು ಹಳ್ಳಿಗಾಡಿನಲ್ಲಿ ಬಿದಿರಿನ ಮೂಲಕ ರಚನೆ ಮಾಡಿ ಪ್ರಾಣಿಗಳನ್ನು ಓಡಿಸಲು ಬಳಸುತ್ತಾರೆ. ಈಗ ಪ್ಲಾಸ್ಟಿಕ್ ಪೈಪ್‌ನಲ್ಲಿ ತಯಾರಿಸಿ, ಗ್ಯಾಸ್ ಲೈಟರ್‌ನಿಂದ ಬಳಸಬಹುದು. ಈ ವಿನ್ಯಾಸವನ್ನು ಪರ್ಕಳ ಸಣ್ಣಕ್ಕಿಬೆಟ್ಟುವಿನ ದೇವರಾಜ್ ನಾಯಕ್ ರಚಿಸಿದ್ದಾರೆ.

ಈ ಪಟಾಕಿಯನ್ನು ದೀಪಾವಳಿಯಂದು ಪರ್ಕಳದ ಶೆಟ್ಟಿಬೆಟ್ಟುವಿನ ರಾಧಾ ಸಂಜೀವ ನಿವಾಸದಲ್ಲಿ ನ.3ರಂದು ಗಣ್ಯರ ಸಮ್ಮುಖ ದಲ್ಲಿ ಸಿಡಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ ಗಣೇಶ್ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News