ಮಂಗಳೂರು : ಪಬ್‌ಗಳಿಗೆ ಪೊಲೀಸರಿಂದ ಹಠಾತ್ ದಾಳಿ

Update: 2021-10-28 17:13 GMT

ಮಂಗಳೂರು, ಅ.28: ನಗರದಲ್ಲಿರುವ ಪಬ್‌ಗಳು ನಿಯಮ ಮೀರಿ ಕಾರ್ಯನಿರ್ಹಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಬ್‌ಗಳಿಗೆ ಗುರುವಾರ ರಾತ್ರಿ ಪೊಲೀಸರು ಹಠಾತ್ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.

ಪಬ್‌ಗಳು ಕೋವಿಡ್ ನಿಯಮ ಪಾಲಿಸುತ್ತಿಲ್ಲ, ಪಬ್‌ನೊಳಗೆ ಬೆಳಕಿನ ವ್ಯವಸ್ಥೆ ಸೇರಿದಂತೆ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿರುವ ನಗರದಲ್ಲಿರುವ  ಪಬ್‌ಗಳಿಗೆ ಪೊಲೀಸರು ಹಠಾತ್ ದಾಳಿ ಮಾಡಿ ತಪಾಸಣೆ ನಡೆಸಿದ್ದು, ಪಬ್ ಮೇಲ್ವಿಚಾರಕರಿಗೆ, ಸಿಬ್ಬಂದಿಗೆ ಕೆಲವೊಂದು ಕಡಕ್ ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News