ಬೆಳ್ತಂಗಡಿ; ವಿದ್ಯಾರ್ಥಿಯನ್ನು ಕಾಲೇಜಿನಿಂದ ಡಿಬಾರ್ ಮಾಡಿರುವುದು ಕಾನೂನು ಬಾಹಿರ: ಸಿಎಫ್ಐ

Update: 2021-10-28 17:25 GMT

ಬೆಳ್ತಂಗಡಿ; ವಾಣಿ ಪದವಿ ಪೂರ್ವ ಕಾಲೇಜಿನಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಕಾರಣಕ್ಕೆ  ಸಮರ್ ಮುಹಮ್ಮದ್ ಎಂಬಾತನನ್ನು ಕಾಲೇಜು ಆಡಳಿತ ಮಂಡಳಿಯವರು ಕಾಲೇಜಿನಿಂದ ಡಿಬಾರ್ ಮಾಡಿರುವುದು ಕಾನೂನು ಬಾಹಿರವಾಗಿದ್ದು ಸಂಸ್ಥೆಯ ಈ ನಿರ್ಧಾರದ ವಿರುದ್ಧ ಕ್ಯಾಂಪಸ್ ಫ್ರೆಂಡ್ ಆಫ್ ಇಂಡಿಯಾ ಎಲ್ಲ ರೀತಿಯ ಹೋರಾಟವನ್ನೂ ನಡೆಸಲಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಾಧಿಕ್ ಜಾರತಾರ್ ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಪಿ.ಯು ಬೋರ್ಡ್ ಅನ್ನು ಭೇಟಿಯಾಗಿದ್ದು ತಹಶೀಲ್ದಾರರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೂ ಮನವಿ ಮಾಡಲಾಗಿದೆ. ಸಂಸ್ಥೆಯವರು ಉದ್ದೇಶ ಪೂರ್ವಕವಾಗಿ ಒಬ್ಬ ವಿದ್ಯಾರ್ಥಿಯನ್ನು ಕಾಲೇಜಿನಿಂದ ಹೊರಹಾಕಿದ್ದು ಇದು ಸರಿಯಾದ ಕ್ರಮವಲ್ಲ. ಆತನಿಗೆ ಶಿಕ್ಷಣವನ್ನು ಮುಂದುವರಿಸಲು ಕೂಡಲೇ ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿ ಸಂಘಟನೆಗಳಲ್ಲಿ ಕೆಲಸ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ‌ ಈಗಿನ ನಾಯಕರುಗಳೆಲ್ಲರೂ ವಿದ್ಯಾರ್ಥಿ ಸಂಘಟನೆಯ ಮೂಲಕ ಬೆಳೆದು ಬಂದವರಾಗಿದ್ದಾರೆ. ಸಂಘಟನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನಿರಾಕರಿಸುವುದು ಸಂವಿಧಾನ ಬಾಹಿರ ಕ್ರಮವಾಗಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆ ತಾಲೂಕು ಆಡಳಿತ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಿಎಫ್ ಐ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಮುಖಂಡರುಗಳಾದ ತಾಜುದ್ದೀನ್ ಪೂಂಜಾಲಕಟ್ಟೆ, ಯಾಸೀನ್ ಬಂಗೇರಕಟ್ಟೆ, ವಿದ್ಯಾರ್ಥಿ ಸಮರ್ ಮುಹಮ್ಮದ್ ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News