ಲೆಬನಾನ್: ಮಾರ್ಚ್ 27ರಂದು ಸಂಸತ್ ಚುನಾವಣೆ‌

Update: 2021-10-28 17:52 GMT
ಸಾಂದರ್ಭಿಕ ಚಿತ್ರ

ಬೈರೂತ್, ಅ.28: ಲೆಬನಾನ್ ಸಂಸತ್ತಿಗೆ ಮಾರ್ಚ್ 27ರಂದು ಚುನಾವಣೆ ನಡೆಸುವ ನಿರ್ಣಯವನ್ನು ಲೆಬನಾನ್ ಸಂಸತ್ತು ಗುರುವಾರ ಬಹುಮತದಿಂದ ಅಂಗೀಕರಿಸಿದೆ.

ಮಾರ್ಚ್ 27ರಂದು ಚುನಾವಣೆ ನಡೆಸಲು ಅಕ್ಟೋಬರ್ 19ರಂದು ಸಂಸತ್ತಿನಲ್ಲಿ ಅನುಮೋದನೆ ದೊರಕಿತ್ತು. ಆದರೆ ಈ ನಿರ್ಣಯವನ್ನು ಆಕ್ಷೇಪಿಸಿದ್ದ ಅಧ್ಯಕ್ಷ ಮೈಕೆಲ್ ಆನ್, ಮತ್ತೆ ಸಂಸತ್ತಿನಲ್ಲಿ ನಿರ್ಣಯವನ್ನು ಮತಕ್ಕೆ ಹಾಕಬೇಕೆಂದು ಸೂಚಿಸಿದ್ದರು. ನಿರ್ಣಯದ ಪರವಾಗಿ 77 ಸಂಸದರು ಮತ ಚಲಾಯಿಸಿದರೆ, ಅಧ್ಯಕ್ಷರ ಪರವಾಗಿರುವ ಸಂಸದರು ವಿರೋಧಿಸಿದರು ಎಂದು ವರದಿಯಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಸುವುದೆಂದು ನಿರ್ಧರಿಸಲಾಗಿತ್ತು.

ಮಾರ್ಚ್‌ನಲ್ಲಿ ಚುನಾವಣೆ ನಡೆಸುವುದನ್ನು ಅಧ್ಯಕ್ಷ ಮೈಕೆಲ್ ಆನ್ ವಿರೋಧಿಸಿದ್ದರು. ಆನ್ ಅವರ ಅಳಿಯ, ಎಫ್‌ಪಿಎಂ ಪಕ್ಷದ ಮುಖಂಡ ಗೆಬ್ರಾನ್ ಬಾಸಿಲ್ ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಸಂವಿಧಾನದ ಉಲ್ಲಂಘನೆಯಾಗಿರುವುದರಿಂದ ಸಂಸತ್ತಿನ ಕಲಾಪದಲ್ಲಿ ಭಾಗವಹಿಸದಿರಲು ನಿರ್ರಿಸಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News