ಪಾಟ್ರಕೋಡಿ: ಅ.31ರಂದು ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ಮಾಹಿತಿ ಶಿಬಿರ
Update: 2021-10-29 15:34 IST
ವಿಟ್ಲ, ಅ.29: ಕೆದಿಲ - ಪಾಟ್ರಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿ, ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅ.31ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಖಾಯಿಲೆಯ ಬಗ್ಗೆ ಮುಂಜಾಗ್ರತಾ ಮಾಹಿತಿ ಶಿಬಿರ ಆಯೋಜಿಸಲಾಗಿದೆ.
ಪಾಟ್ರಕೋಡಿಯ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯುವ ಶಿಬಿರವನ್ನು ಪಾಟ್ರಕೋಡಿ ಎಂ.ಜೆ.ಎಂ. ಖತೀಬ್ ಶರೀಫ್ ಅಝ್ಅರಿ ಉದ್ಘಾಟಿಸುವರು. ಸೈಯದ್ ಅಲ್ ಹಾದಿ ಹಂಝ ತಂಙಳ್ ಪಾಟ್ರಕೋಡಿ ದುಆಗೈಯುವರು. ಪಾಟ್ರಕೋಡಿ ಎಂ.ಜೆ.ಎಂ. ಅಧ್ಯಕ್ಷ ಯೂಸುಫ್ ಅಧ್ಯಕ್ಷತೆ ವಹಿಸುವರು.
ಇದೇವೇಳೆ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಯು.ಕೆ.ಮೋನು ಅವರನ್ನು ಸನ್ಮಾನಿಸಲಾಗುವುದು ಎಂದು ಪಾಟ್ರಕೋಡಿ ಎಂ.ಜೆ.ಎಂ. ಕಾರ್ಯದರ್ಶಿ ಇಬ್ರಾಹೀಂ ಬಾತಿಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.