×
Ad

ಅಸೈಗೋಳಿ: ಜೆಸಿಐ ವಲಯ ಅಧ್ಯಕ್ಷ ಭೇಟಿ, ಶಾಶ್ವತ ಯೋಜನೆಗಳ ಉದ್ಘಾಟನೆ

Update: 2021-10-29 19:09 IST

ಉಳ್ಳಾಲ: ಜೆಸಿಐ ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ಜೆಸಿಐ ವಲಯ ಅಧ್ಯಕ್ಷ ಭೇಟಿ ಹಾಗೂ ಶಾಶ್ವತ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮವು ಅಸೈಗೋಳಿ ಆರ್ ವಿ ಕಾಂಪ್ಲೆಕ್ಸ್ ನಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಲಯ ಅಧ್ಯಕ್ಷ ಪಿಪಿಪಿ ಸೌಜನ್ಯ ಹೆಗ್ಡೆ ಅವರು ಸಂಘಟನೆ ಜನಪರ ಸೇವೆ ಉತ್ತಮವಾಗಿ ಮಾಡಿದರೆ ಜನರ ಪ್ರೋತ್ಸಾಹ ಸಿಗಲು ಸಾಧ್ಯ ಎಂದರು. ಸ್ಥಾಪಕಾಧ್ಯಕ್ಷ ತ್ಯಾಗಂ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್ ವರದಿ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಮಂಗಳ ಗಂಗೋತ್ರಿ ಅಧ್ಯಕ್ಷ ಪ್ರಾಂಕಿ ಫ್ರಾನ್ಸಿಸ್ ಕುಟ್ಟಿನ್ಹ ಸ್ವಾಗತಿಸಿದರು. 

ಕಾರ್ಯಕ್ರಮದಲ್ಲಿ ಪವಿತ್ರ ಗಣೇಶ್, ರವೀಂದ್ರ ರೈ,ಭಾಷಾ ಸಾಂಬಾರ್ ತೋಟ,ಶರತ್ ಕುಮಾರ್, ದೀಪಕ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ, ಆನಂದ ಕೆ ಅಸೈಗೋಳಿ, ಲವೀನಾ, ವಲೇರಿಯನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಗಣಪತಿ, ವೆಂಕಟ್ ರಾಜ್ ರೈ,ಗ್ಲಾಡೀಸ್, ಕಾನ್ಸೆಪ್ಟ್ ಡಿ ಸೋಜ, ಮರಿಯರವರನ್ನು  ಸನ್ಮಾನಿಸಲಾಯಿತು.ಅತ್ಯಧಿಕ ಅಂಕ ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News