ಪುನೀತ್ ನಿಧನಕ್ಕೆ ಪೇಜಾವರಶ್ರೀ, ಶೋಭಾ ಸಂತಾಪ
ಉಡುಪಿ, ಅ.29: ಇಂದು ಅಪರಾಹ್ನ ತೀವ್ರ ಹೃದಯಾಘಾತದಿಂದ ನಿಧನ ರಾದ ಕನ್ನಡ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಪವರ್‌ಸ್ಟಾರ್ ಎಂದೇ ಖ್ಯಾತರಾಗಿದ್ದ ಚಿಕ್ಕಮಗಳೂರಿನ ಅಳಿಯ ಪುನೀತ್‌ರಾಜ್ ಅವರ ಅಕಾಲಿಕ ನಿಧನ ಸುದ್ದಿ ತಿಳಿದು ನನಗೆ ಅತೀವ ದು:ಖವುಂಟಾಗಿದೆ. ಅವರ ಕುಟುಂಬಕ್ಕೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ.’ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
‘ಅಭಿನಯದಲ್ಲಿ ಅಪೂರ್ವ ಯಶಸ್ಸು ಸಂಪಾದಿಸುವ ಜೊತೆಗೆ ಹತ್ತಾರು ಸೇವಾಕಾರ್ಯಗಳ ಮೂಲಕ ಮಾದರಿಯಾದ ಮಾನವೀಯ ಕರ್ತವ್ಯಗಳನ್ನು ನಿರ್ವಹಿಸುತಿದ್ದ ಪುನೀತ್‌ರಾಜ್ ಅವರ ಹಠಾತ್ ನಿಧನದ ವಾರ್ತೆ ತಿಳಿದು ತೀವ್ರ ಖೇಧವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ಹಾಗೂ ಪುನೀತ್ ಅವರ ವಿಯೋಗದ ದು:ಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.’ ಎಂದು ಪೇಜಾವರ ಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.