ದ.ಕ.: ಕೋವಿಡ್‌ಗೆ ಓರ್ವ ಬಲಿ, 35 ಮಂದಿಗೆ ಸೋಂಕು

Update: 2021-10-29 14:55 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಅ.28: ದ.ಕ. ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿಗೆ ಓರ್ವ ಬಲಿಯಾಗಿದ್ದು, 35 ಮಂದಿಗೆ ಕೊರೋನ ಸೋಂಕು ತಗುಲಿದೆ. 24 ಮಂದಿ ಗುಣಮುಖರಾಗಿದ್ದಾರೆ.

ಪಾಸಿಟಿವಿಟಿ ದರ ಶೇ.0.45 ದಾಖಲಾಗಿದೆ. 1,15,433 ಸೋಂಕಿತರ ಪೈಕಿ 1,13,468 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ 1,686 ಮಂದಿ ಮೃತಪಟ್ಟಿದ್ದಾರೆ. ಸದ್ಯ 279 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ 88,461 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 1,07,39,070 ರೂ. ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News