×
Ad

ನವೆಂಬರ್ 1 ಅನ್ನು 'ಕನ್ನಡ ಭಾಷಾ ದಿನ' ಎಂದು ಘೋಷಿಸಿದ ಅಮೆರಿಕದ ಜಾರ್ಜಿಯಾ ರಾಜ್ಯ

Update: 2021-10-30 13:57 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಮೆರಿಕದ ಜಾರ್ಜಿಯಾ ರಾಜ್ಯವು ಅಲ್ಲಿನ ಕನ್ನಡಿಗರ ಹಲವು ಮನವಿಗಳಿಗೆ ಸ್ಪಂದಿಸಿ ನವೆಂಬರ್ 1 ಅನ್ನು ಕನ್ನಡ ಭಾಷೆ ಹಾಗೂ ರಾಜ್ಯೋತ್ಸವ ದಿನವನ್ನಾಗಿ ಘೋಷಿಸಿದೆ ಎಂದು Times Of India ವರದಿ ಮಾಡಿದೆ.

ನೃಪತುಂಗ ಕನ್ನಡ ಕೂಟದ ಬ್ಯಾನರ್ ಅಡಿಯಲ್ಲಿ ಕನ್ನಡಿಗರ ಒತ್ತಾಯದ ನಂತರ ಜಾರ್ಜಿಯಾ ಗವರ್ನರ್ ಬ್ರಿಯಾನ್ ಪಿ. ಕೆಂಪ್ ಅವರು ಸಹಿ ಹಾಕಿರುವ ಈ ಘೋಷಣೆಯು ಬಂದಿದೆ.

“ಕನ್ನಡ ಭಾಷೆಗೆ ಅಮೆರಿಕದಲ್ಲಿ ರಾಜ್ಯ ಮಟ್ಟದಲ್ಲಿ ಗೌರವ ಸಿಕ್ಕಿರುವುದು ಇದೇ ಮೊದಲು. ಇದು ಜಗತ್ತಿನ ಎಲ್ಲಾ ಕನ್ನಡಿಗರು ಹೆಮ್ಮೆ ಪಡುವ ವಿಷಯ. ಬಹುಕಾಲ ಉಳಿದಿರುವ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಇದೊಂದು ದೊಡ್ಡ ಗೆಲುವು” ಎಂದು ಕೂಟದ ಸದಸ್ಯ ಹಾಗೂ  ಹಿರಿಯ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಭರತ್ ತೇಜಸ್ವಿ Times Of India ಗೆ ತಿಳಿಸಿದರು.

ಜಾರ್ಜಿಯಾದಲ್ಲಿ ಸುಮಾರು 2,000 ಕನ್ನಡ ಮಾತನಾಡುವ ಕುಟುಂಬಗಳು ನೆಲೆಸಿದ್ದು, ನೃಪತುಂಗ ಕನ್ನಡ ಕೂಟವು ಸುಮಾರು 500 ಸದಸ್ಯರನ್ನು ಹೊಂದಿದೆ. ಕಳೆದ ಐದು ದಶಕಗಳಿಂದ ಈ ಪ್ರದೇಶದಲ್ಲಿ ಅತ್ಯಂತ ಸಕ್ರಿಯವಾದ ಭಾಷಾ ಮತ್ತು ಸಾಂಸ್ಕೃತಿಕ ಗುಂಪಾಗಿ ಗುರುತಿಸಿಕೊಂಡಿದೆ.

ಕನ್ನಡ ಭಾಷೆಯನ್ನು ಗುರುತಿಸಲು ಮತ್ತು ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಲು ಕಳೆದ ಕೆಲವು ವರ್ಷಗಳಿಂದ ನೃಪತುಂಗ ಕನ್ನಡ ಕೂಟವು ರಾಜ್ಯ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿದೆ.

ಕನ್ನಡಿಗರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಹಾಗೆಯೇ ಜಾರ್ಜಿಯಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ಕೃಷ್ಟಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗವರ್ನರ್ ಕೆಂಪ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News