ಉಡುಪಿ: ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಅರ್ಪಣೆ
Update: 2021-10-30 19:28 IST
ಉಡುಪಿ, ಅ.30: ನಗರದ ಮಾರುತಿ ವೀಥೀಕಾದ ಜೋಸ್ ಆಲುಕಾಸ್ ಆಭರಣದ ಮಳಿಗೆಯ ಮುಂಭಾಗದಲ್ಲಿ ಕನ್ನಡ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪುನೀತ್ ಅವರ ಭಾವಚಿತ್ರಕ್ಕೆ ಉದ್ಯಮಿ ಗುರುರಾಜ ಎಂ.ಶೆಟ್ಟಿ ಪುಷ್ಪ ನಮನ ಸಲ್ಲಿಸಿ ದೀಪಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಗಳಾದ ರವೀಂದ್ರ, ಸುಧೀರ್ ಶೇಟ್, ಸುನಿಲ್ ಶೇಟ್, ಚಂದ್ರ ಗಾಣಿಗ, ಗಾಯಕ ಹರೀಶ್ ನಿಟ್ಟೂರ್ ಪ್ರಸನ್ನರಾಜ್ ಮಠದಬೆಟ್ಟು, ಕಮಲಾಕರ್, ಭಾಸ್ಕರ್ ಮೆಂಡನ್, ಪ್ರಶಾಂತ್, ಮೇಸ್ತ್ರಿ ಶಿವಪ್ಪ, ಉಮೇಶ್, ಗೋಕುಲ್ ಕಾಮತ್, ದಿನೇಶ್ ನಾಯಕ್, ರಾಮಾನಾಥ್ ನಾಯಕ್, ಸುಧೀರ್ ಶೆಟ್ಟಿ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು. ಗಣೇಶ ಸರಳೇಬೆಟ್ಟು ಕಾರ್ಯ ಕ್ರಮ ನಿರೂಪಿಸಿದರು. ರಾಜೇಶ್ ಕಲ್ಮಾಡಿ ವಂದಿಸಿದರು.