ಡಾ. ಫಾರೂಕ್ ನಈಮಿಗೆ ಪೊಸೋಟ್ ತಂಙಲ್ ಪುರಸ್ಕಾರ
ಮಂಗಳೂರು: ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ, ಸಾಮಾಜಿಕ ಸುಧಾರಣೆಗಾಗಿ ಕಾರ್ಯನಿರತವಾಗಿರುವ ಮುಈನುಸ್ಸುನ್ನ ಮೋರಲ್ ಅಕಾಡೆಮಿ ಕರ್ನಾಟಕ ಇದರ ವತಿಯಿಂದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಲ್ ಅವರ ಹೆಸರಿನಲ್ಲಿ ನೀಡಲಾಗುವ ದಅ್‌ವಾ ಪುರಸ್ಕಾರವನ್ನು ಡಾ. ಫಾರೂಕ್ ನಈಮಿ ಅವರಿಗೆ ನೀಡಲಾಯಿತು.
ಶೈಕ್ಷಣಿಕ, ಧರ್ಮಬೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ, ಖ್ಯಾತ ವಾಗ್ಮಿ ಡಾ. ಫಾರೂಕ್ ನಈಮಿಯವರು ಉತ್ತರ ಭಾರತದಲ್ಲಿ ವಿದ್ಯಾಭ್ಯಾಸ ಮತ್ತು ಜನ ಕಲ್ಯಾಣ ಚಟುವಟಿಕೆಗಳಲ್ಲಿ ಸಲ್ಲಿಸುತ್ತಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಪ್ರಸ್ತುತ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಝೀನತ್ ಭಕ್ಷ್ ಯತೀಂ ಖಾನಾ ಸಭಾಂಗಣದಲ್ಲಿ ಸಜ್ಜುಗೊಳಿಸಲಾದ ತಾಜುಲ್ ಉಮರಾ ಮರ್ಹೂಂ ಬಾವ ಹಾಜಿ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಲ್ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು
ಅಲ್‌ಅನ್ಸಾರ್ ಪತ್ರಿಕಾ ವ್ಯವಸ್ಥಾಪಕ ಜಿಎಂ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆಎಂ ಮುಸ್ತಫಾ ನಈಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಡಾ. ಝೈನಿ ಕಾಮಿಲ್, ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಸಖಾಫಿ, ಕೆಸಿಎಫ್ ಅಂತರಾಷ್ಟ್ರೀಯ ಅಧ್ಯಕ್ಷ ಡಾ. ಶೇಖ್ ಬಾವ, ಮುಈನುಸ್ಸುನ್ನ ಉಪಾಧ್ಯಕ್ಷ ಕೆಎಂ ಅಬೂಬಕರ್ ಸಿದ್ದೀಖ್ ಮಾತನಾಡಿದರು.
ಮಂಗಳೂರು ಸೆಂಟರ್ ಎಸ್‌ವೈಎಸ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಂಡ್ ಮೌಲಿದ್ ಮಜ್ಲಿಸ್ ನಡೆಯಿತು. ಸಯ್ಯಿದ್ ತ್ವಾಹಾ ತಂಙಲ್ ಕಲ್ಲಕಟ್ಟ ಪ್ರಾರ್ಥನೆ ನಡೆಸಿದರು. ಮುಹಮ್ಮದ್ ಮದನಿ ಜಪ್ಪು, ಹೈದರ್ ಮದನಿ ಅಲ್ ಅಝ್ಹರಿಯ, ಸಯ್ಯಿದ್ ಇಸ್ಹಾಖ್ ತಂಙಲ್, ಸಯ್ಯಿದ್ ಮೀರಾಜ್ ತಂಙಲ್, ಶಾಕಿರ್ ಹಾಜಿ ಹೈಸಂ, ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ರಶೀದ್ ಹಾಜಿ ಪಾಂಡೇಶ಼್ವರ ಮತ್ತಿತರರು ಉಪಸ್ಥಿತರಿದ್ದರು.