×
Ad

ಮಂಗಳೂರು: ಕ್ರೆಡಿಟ್ ಕಾರ್ಡ್‌ನ ಕ್ಯಾಶ್ ಜಾಸ್ತಿ ಮಾಡುವುದಾಗಿ ನಂಬಿಸಿ 6,94,918 ರೂ. ವಂಚನೆ

Update: 2021-10-30 22:28 IST

ಮಂಗಳೂರು: ಕ್ರೆಡಿಟ್ ಕಾರ್ಡ್‌ನ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ 6,94,918ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ್ನು ಹೊಂದಿದ್ದು, ಅ.29ರಂದು ಅವರ ಮೊಬೈಲ್‌ಗೆ ಮಹಿಳೆಯೊಬ್ಬರು ಕರೆ ಮಾಡಿ ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡುವುದಾಗಿ ನಂಬಿಸಿದ್ದಾರೆ. ಬಳಿಕ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಬಗ್ಗೆ ಕರೆ ಮಾಡಿದ್ದು, ನಿಮ್ಮ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ತಿಳಿಸಿ, ನಂತರ ಒಟಿಪಿ ಶೇರ್ ಮಾಡಲು ತಿಳಿಸಿದ್ದಾರೆ. ಅದರಂತೆ ಒಟಿಪಿ ನಂಬರ್ ನೀಡಿದ ಕೂಡಲೇ ದೂರುದಾರರ ಖಾತೆಯಿಂದ 99,274ರೂ. ವರ್ಗಾವಣೆಯಾಗಿದೆ. ತದನಂತರ ಕ್ರೆಡಿಟ್‌ಕಾರ್ಡ್‌ನಿಂದ ಹಂತಹಂತವಾಗಿ 6,94,918ರೂ. ವರ್ಗಾವಣೆ ಮಾಡಲಾಗಿದೆ.ಈ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News