ಎನ್ ಸಿಬಿ ತನಿಖೆ ಶೈಲಿ ಟೀಕಿಸಿದ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್

Update: 2021-10-31 05:43 GMT
photo: ANI

ಮುಂಬೈ: 2020 ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅವರ ಕುಟುಂಬವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್  ಅವರು  ಡ್ರಗ್ಸ್ ವಿರೋಧಿ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹಾಗೂ  ಅದರ ತನಿಖೆಯ ಶೈಲಿಯನ್ನು ಕಟುವಾಗಿ  ಟೀಕೆ ಮಾಡಿದ್ದಾರೆ.

"ಎನ್ ಸಿಬಿ ಮಾಧ್ಯಮಗಳಲ್ಲಿ ಬರುವುದಕ್ಕೆ ಹೆಚ್ಚು ಬಹಳ ಉತ್ಸುಕವಾಗಿದೆ ಮತ್ತು ಮೂಲತಃ ಈ ಎಲ್ಲಾ ಪ್ರಕರಣಗಳನ್ನು ವ್ಯಾಪಕ ಪ್ರಚಾರಕ್ಕಾಗಿ ತೆಗೆದುಕೊಳ್ಳಲಾಗುತ್ತಿದೆ" ಎಂದು ವಕೀಲರು NDTV ಗೆ ತಿಳಿಸಿದರು.

ಈ ತಿಂಗಳ ಆರಂಭದಲ್ಲಿ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧನ ಮತ್ತು ನಂತರದ ಜಾಮೀನಿನ ನಂತರ ವಕೀಲರ ಈ ಹೇಳಿಕೆ ಬಂದಿದೆ.

ಜೂನ್ 2020 ರಲ್ಲಿ ಬಾಲಿವುಡ್ ತಾರೆ ಸುಶಾಂತ್ ಸಿಂಗ್  ಸಾವಿನ ಕುರಿತು ನಟಿ ರಿಯಾ ಚಕ್ರವರ್ತಿ ವಿರುದ್ಧದ ಕಾನೂನು ಹೋರಾಟದಲ್ಲಿ ಸುಶಾಂತ್ ಸಿಂಗ್ ಅವರ ತಂದೆ ಕೆ.ಕೆ. ಸಿಂಗ್ ಅವರನ್ನು ವಿಕಾಸ್ ಸಿಂಗ್ ಪ್ರತಿನಿಧಿಸಿದ್ದರು. ರಜಪೂತ್ ಆತ್ಮಹತ್ಯೆಯಿಂದಾಗಿ ಸಾವನ್ನಪ್ಪಿದ್ದರೂ ಚಲನಚಿತ್ರೋದ್ಯಮದಲ್ಲಿ ಮಾದಕವಸ್ತು ಸಂಪರ್ಕಗಳ ಕುರಿತು ತನಿಖೆಯ ಸರಣಿಯನ್ನು ಎನ್ ಸಿಬಿ ನಡೆಸಿತ್ತು.

ಕಳೆದ ವರ್ಷದಲ್ಲಿ ಎನ್‌ಸಿಬಿ ಹಲವಾರು ಚಿತ್ರರಂಗದ ವ್ಯಕ್ತಿಗಳನ್ನು ಪ್ರಶ್ನಿಸಿದೆ. ಆ ಹಲವು ತನಿಖೆಗಳಲ್ಲಿ ಆಯ್ದ  ವೈಯಕ್ತಿಕ ವಾಟ್ಸ್ ಆ್ಯಪ್ ಚಾಟ್‌ಗಳು ಹಾಗೂ  ಸಂದೇಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News