×
Ad

ಮಂಗಳೂರು: ಕಾಂಗ್ರೆಸ್ ನಿಂದ ಇಂದಿರಾ ಗಾಂಧಿ ಪುಣ್ಯತಿಥಿ ಪ್ರಯುಕ್ತ ಸ್ಮೃತಿ ಸಂಸ್ಮರಣೆ

Update: 2021-10-31 12:12 IST

ಮಂಗಳೂರು, ಅ.31: ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕಿಯಾಗಿದ್ದ ದಿವಂಗತ ಇಂದಿರಾ ಗಾಂಧಿ ಪುಣ್ಯತಿಥಿ ಪ್ರಯುಕ್ತ ಇಂದು ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸ್ಮೃತಿ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ನಗರದ ಪುರಭವನ ಸಮೀಪದ ಗಾಂಧಿ ಪ್ರತಿಮೆ ಎದುರು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕೊಡುಗೆಗಳನ್ನು ಸ್ಮರಿಸಿದರು.

20 ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಮೈಲಿಗಲ್ಲು ಹಾಕಿದ್ದ ಇಂದಿರಾ ಗಾಂಧಿಯವರು, ಪ್ರತಿಪಕ್ಷದ ನಾಯಕರಿಂದಲೂ ದುರ್ಗೆ ಎಂದು ಪ್ರಶಂಸೆಗೊಳಗಾದವರು. ಆದರೆ ಇಂದು ಗಾಂಧೀಜಿ, ಇಂದಿರಾ ಗಾಂಧಿಯವರನ್ನು ಕೊಂದ ಸಂತಾನದವರು ಪುಣ್ಯತಿಥಿ ಆಚರಣೆಯನ್ನೂ ಗೇಲಿ ಮಾಡುತ್ತಿರುವುದು ದೊಡ್ಡ ವಿಚಾರವಲ್ಲ. ಸಂವಿಧಾನ ವಿರೋಧಿಸುವವರು, ಸಂವಿಧಾನ ಬದಲಾಯಿಸಲು ಬಂದಿರುವುದಾಗಿ ಹೇಳಿರುವವರಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೇಶದ ಜನರು ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವಾಗ ವೈಯಕ್ತಿಕ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತಿರುವವರು ದೇಶದ ಸಂಪತ್ತನ್ನೆಲ್ಲಾ ಮಾರುತ್ತಿದ್ದಾರೆ. ಯುದ್ಧ ಅಥವಾ ತುರ್ತು ಸಂದರ್ಭದ ಉಪಯೋಗಕ್ಕಾಗಿ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಬಂಕರ್‌ಗಳಲ್ಲಿ ಸಂಗ್ರಹಿಸಿಡಲಾಗಿದ್ದ ತೈಲವನ್ನು ಮಾರಾಟ ಮಾಡಿ 5,000 ಕೋಟಿ ರೂ. ಲಾಭ ಮಾಡಿರುವುದಾಗಿ ಹೇಳಿರುವವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,  ಮುಖಂಡರಾದ ಪಿ.ವಿ. ಮೋಹನ್, ಶಶಿಧರ ಹೆಗ್ಡೆ, ಇಬ್ರಾಹೀಂ ಕೋಡಿಜಾಲ್, ಜೆ. ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಅಪ್ಪಿ, ಲುಕ್ಮಾನ್ ಬಂಟ್ವಾಳ, ಅಬ್ದುಲ್ಲತೀಫ್, ಟಿ.ಕೆ. ಸುಧೀರ್, ವಿಶ್ವಾಸ್ ಕುಮಾರ್ ದಾಸ್, ನಝೀರ್ ಬಜಾಲ್, ವಿವೇಕ್‌ರಾಜ್ ಪೂಜಾರಿ, ಅನವೀನ್ ಡಿಸೋಜಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮೋಹನ್ ಗೌಡ, ಶಾಹುಲ್ ಹಮೀದ್, ಡಾ. ಶೇಖರ್ ಪೂಜಾರಿ, ಸವಾದ್ ಸುಳ್ಯ, ಜೋಕಿಂ ಡಿಸೋಜ, ಶಾಂತಲಾ ಗಟ್ಟಿ, ಬಿ.ಎಂ.ಅಬ್ಬಾಸ್ ಅಲಿ, ಅಲ್ಟಿರ್ ಡಿಕುನ್ನ, ಸಿಎಂ ಮುಸ್ತಫ, ರಮಾನಂದ ಪೂಜಾರಿ, ಯೂಸುಫ್ ಉಚ್ಚಿಲ್, ಎ.ಆರ್.ಇಮ್ರಾನ್, ರಾಕೇಶ್ ದೇವಾಡಿಗ, ಸದಾಶಿವ ಅಮೀನ್, ತನ್ವೀರ್ ಶಾ, ಜೇಮ್ಸ್ ಶಿವಬಾಗ್, ಪ್ರಭಾಕರ ಶ್ರೀಯಾನ್, ಯೋಗೀಶ್ ನಾಯಕ್, ಲಿಖಾಯತ್ ಶಾ, ಮಿಥುನ್ ಕುಮಾರ್, ವಿಶ್ವನಾಥ್ ಬಿ. ಬಜಾಲ್, ಸೌಹಾನ್ ಎಸ್.ಕೆ., ಸತೀಶ್ ಪೆಂಗಲ್, ಗಿರೀಶ್ ಶೆಟ್ಟಿ, ಭಾಸ್ಕರ ರಾವ್, ಅಬೂಬಕರ್ ಕುದ್ರೋಳಿ, ಕವಿತಾ ವಾಸು, ಮಹೇಶ್ ಕೋಡಿಕಲ್, ಸಂಜೀವ ಪಾಂಡೇಶ್ವರ, ಉದಯ ಆಚಾರಿ, ವಿಕ್ಟೋರಿಯ, ಚಾಂದಿನಿ, ಸಲೀಂ ಕುದ್ರೋಳಿ, ರಾಜೇಶ್ ಬೆಂಗ್ರೆ, ಮುಹಮ್ಮದ್ ಬಪ್ಪಲಿಗೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯಲಾಯಿತು. ಈ ಸಂದರ್ಭ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News