×
Ad

ನ.1ರಿಂದ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತನ ಅಭಿಯಾನಕ್ಕೆ ಚಾಲನೆ

Update: 2021-10-31 12:20 IST

ಮಂಗಳೂರು, ಅ.31: ಕರ್ನಾಟಕ ಮುಸ್ಲಿಂ ಜಮಾಅತ್ ನ ಸದಸ್ಯತನ ಅಭಿಯಾನಕ್ಕೆ ರಾಜ್ಯಾದ್ಯಂತ ನವೆಂಬರ್ 1ರಿಂದ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಸಂಘಟನೆಯ ಪುನಾರಚನೆಯ ಮೂರು ವರ್ಷಗಳ ಅವಧಿಯ ನಂತರ ಎಲ್ಲಾ ಗ್ರಾಮ, ಬ್ಲಾಕ್, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಘಟಕಗಳ ಅಧಿವೇಶನಗಳು ನಡೆಯಲಿವೆ. ಇದರ ಭಾಗವಾಗಿ ಸಂಘಟನೆಗಾಗಿ ಕರ್ನಾಟಕ ರಾಜ್ಯಾದ್ಯಂತ ನವೆಂಬರ್ 1ರಿಂದ 30ರ ತನಕ ಸದಸ್ಯತನ ಅಭಿಯಾನ ನಡೆಯಲಿದೆ.

ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಲೀಲ್ ಬುಖಾರಿ ತಂಙಲ್ ನೇತೃತ್ವದಲ್ಲಿ ಕೊಡಗಿನಲ್ಲಿ ನಡೆಲಿದೆ. ಗೂಗಲ್ ಫಾರಂ ಮೂಲಕವೂ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್  ರಾಜ್ಯ ಆಯ್ಕೆ ಮಂಡಳಿಯ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಬಜ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News