ದ.ಕ. ಜಿಲ್ಲೆಯ ಒಂದು ಸಂಸ್ಥೆ, ಮೂವರು ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Update: 2021-10-31 17:32 IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಮಕೃಷ್ಣ ಆಶ್ರಮ ಸಂಸ್ಥೆ (ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ) ಹಾಗೂ ಡಾ. ಸುರೇಶ್ ರಾವ್ (ವೈದ್ಯಕೀಯ), ಹೆರಾಲ್ಡ್ ಸಿರಿಲ್ ಡಿಸೋಜ (ಸಂಗೀತ), ರಾಮಚಂದ್ರ ಬೈಕಂಪಾಡಿ (ಪರಿಸರ) ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಹೊರನಾಡ ಕನ್ನಡಿಗರ ಕ್ಷೇತ್ರದಲ್ಲಿ ನೀಡಲಾದ ಪ್ರಶಸ್ತಿಗೆ ಮುಂಬೈಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ಉಪ್ಪಿನಂಗಡಿಯ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.