×
Ad

ದೇರಳಕಟ್ಟೆ: ಹಲೀಮಾ ಬಾವಾಸ್‌ನ 'ಬಿ-ಮಾರ್ಟ್ ಶಾಪಿಂಗ್ ಮಾರ್ಟ್' ಶುಭಾರಂಭ

Update: 2021-10-31 19:27 IST

ಮಂಗಳೂರು, ಅ.31: ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನ ಎದುರುಗಡೆ ಹಲೀಮಾ ಬಾವಾಸ್‌ನ ಬಿ-ಮಾರ್ಟ್ ಶಾಪಿಂಗ್ ಮಾರ್ಟ್ ರವಿವಾರ ಶುಭಾರಂಭಗೊಂಡಿತು.

ಬಿ-ಮಾರ್ಟ್ ಅನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೆಳೆಯುತ್ತಿರುವ ನಗರವಾದ ದೇರಳಕಟ್ಟೆಯಲ್ಲಿ ಆಹಾರ, ಅಗತ್ಯ ವಸ್ತುಗಳು, ಫ್ಯಾನ್ಸಿ, ಸಲೂನ್, ರೆಡಿಮೇಡ್ಸ್ ಒಂದೇ ಸೂರಿನಡಿ ಸಿಗುತ್ತಿರುವುದು ಇಲ್ಲಿನ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಹಾಯಕರು, ವಿದ್ಯಾರ್ಥಿಗಳು, ವೈದ್ಯರಿಗೆ ಅನುಕೂಲವಾಗಲಿದೆ. ಬಾವಾ ಸಹೋದರರಾದ ಮುನೀರ್ ಬಾವಾ, ಮಸೂದ್ ಬಾವಾ, ನೌಷಾದ್ ಬಾವಾ ಹಾಗೂ ಅವರ ಬಾವ ರೆಡ್ ಚಿಲ್ಲೀಸ್ ಮಾಲಕ ನಝೀರ್ ಅಬ್ಬಾಸ್‌ರ ನೇತೃತ್ವದಲ್ಲಿ ನಿರ್ಮಿಸಿದ ಬಿ-ಮಾರ್ಟ್ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಬೆಳ್ಮ ಕೊರಗಜ್ಜ ಸೇವಾ ಸಮಿತಿಯ ರವಿ ಪೂಂಜಾ, ಮುನ್ನೂರು ಗ್ರಾಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಕರ್ನಾಟಕ ಸ್ವಾ ಮಿಲ್ ಪಾಲುದಾರ ಹಾಗೂ ಡಿ-ಮಾರ್ಟ್ ಸ್ಥಳದ ಮಾಲಕ ಅಬ್ದುಸ್ಸಮದ್, ಕನ್ನಡ ರಕ್ಷಣಾ ವೇದಿಕೆಯ ಮುಖಂಡ ಮುಹ್ಸೀರ್ ಅಹ್ಮದ್ ಸಾಮಣಿಗೆ ಶುಭ ಹಾರೈಸಿದರು.

ಈ ಸಂದರ್ಭ ಕೋವಿಡ್ ಸಮಯದಲ್ಲಿ ಸಾಮಾಜಿಕ ಸೇವೆ ಮಾಡಿದ 19 ಮಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಕರ್ನಾಟಕ ಸ್ವಾ ಮಿಲ್ ಪಾಲುದಾರ ಅಬ್ದುರ್ರಹೀಂ, ಡೀಲ್ ಗ್ರೂಪ್‌ನ ಆಸಿಫ್ ಅಹ್ಮದ್, ದಾರುಸ್ಸಲಾಂ ಜುಮಾ ಮಸ್ಜಿದ್‌ನ ಅಧ್ಯಕ್ಷ ಮುಹಮ್ಮದ್ ಪರಪ್ಪು, ದೀಪಕ್ ಪಿಲಾರ್ ಮತ್ತಿತರರು ಭಾಗವಹಿಸಿದ್ದರು. ರಫೀಕ್ ಮಾಸ್ಟರ್ ಸ್ವಾಗತಿಸಿದರು. ಸೋಶಿಯಲ್ ಫಾರೂಕ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಬಿ-ಮಾರ್ಟ್ ಶಾಪಿಂಗ್ ಮಾರ್ಟ್‌ನಲ್ಲಿ ಬೇಕರಿ, ಹೌಸ್ ಹೋಲ್ಡ್, ಜನರಲ್ ಸ್ಟೋರ್ಸ್, ಮೊಬೈಲ್, ಸಲೂನ್, ರೆಡಿಮೇಡ್, ಟೈಲರ್, ಫ್ಯಾನ್ಸಿ ಅಂಗಡಿಗಳು ಕಾರ್ಯಾಚರಿಸಲಿವೆ. ಅಲ್ಲದೆ ಸೌತ್ ಇಂಡಿಯನ್, ಅರೇಬಿಯನ್, ಚೈನೀಸ್ ದಾವಣಗೆರೆ ಫುಡ್ ಸಹಿತ ಪಿಝ್ಝ, ಫ್ರೈಡ್ ಚಿಕನ್, ಫ್ರೆಸ್ ಜ್ಯೂಸ್‌ಗಳ ಫುಡ್ ಕೋರ್ಟ್ ಇರಲಿವೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News