ಮಂಗಳೂರು: ಅಂತರ್ ಜಿಲ್ಲಾ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾವಳಿ
ಮಂಗಳೂರು, ಅ.31: ದ.ಕ. ಚೆಸ್ ಅಸೋಸಿಯೇಶನ್ ರವಿವಾರ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ 2ನೇ ಅಂತರ್ ಜಿಲ್ಲಾ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾವಳಿ ದಾಖಲೆ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವ ಮೂಲಕ ಯಶಸ್ವಿಯಾಗಿ ಜರುಗಿತು.
ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕೆಐಒಸಿಎಲ್ ಹಿರಿಯ ಪ್ರಬಂಧಕ ಮುರುಗೇಶ್ ಎಸ್. ಮುಖ್ಯ ಅತಿಥಿಯಾಗಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎ.ಬಿ.ಶೆಟ್ಟಿ ಡೆಂಟಲ್ ಸಾಯನ್ಸ್‌ನ ಅಸೋಸಿಯೇಟ್ ಡೀನ್ ಡಾ.ಅಮರಶ್ರೀ ಅಮರನಾಥ್ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಕೋಶಾಧಿಕಾರಿ ಪದ್ಮರಾಜ ಆರ್. ಮುಖ್ಯ ಅತಿಥಿಯಾಗಿದ್ದರು.
ಚೆಸ್ ಅಸೋಸಿಯೇಶನ್‌ನ ಅಧ್ಯಕ್ಷ ರಮೇಶ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್ ಕಾರ್ಯದರ್ಶಿ ಅಭಿಷೇಕ್ ಕಟ್ಟೆಮಾರ್, ಕೋಶಾಧಿಕಾರಿ ಪೂರ್ಣಿಮಾ ಎಸ್.ಆಳ್ವ, ಉಪಾಧ್ಯಕ್ಷರಾದ ವಿ.ಪಿ.ಆಶೀರ್ವಾದ್, ಸಂದೀಪ್ ಕುಮಾರ್, ಜೊತೆ ಕಾರ್ಯದರ್ಶಿ ಸತ್ಯಪ್ರಸಾದ್ ಕೆ., ಜೊತೆ ಕೋಶಾಧಿಕಾರಿ ಅಡಾಲ್ಫ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 160 ಸ್ಪರ್ಧಾಳುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.