ತೋನ್ಸೆ ಹೆಲ್ತ್ ಸೆಂಟರ್ ಅಧ್ಯಕ್ಷ ಬಿ.ಎಂ.ಝಫರ್ ಗೆ 'ಇಂಡಿಯನ್ ಅಚೀವರ್ಸ್ ಅವಾರ್ಡ್ʼ
Update: 2021-11-01 14:19 IST
ಹೊಸದಿಲ್ಲಿ: ಇಂಡಿಯನ್ ಅಚೀವರ್ಸ್ ಫೋರಂ ನೀಡುವ ʼಇಂಡಿಯನ್ ಅಚೀವರ್ಸ್ ಅವಾರ್ಡ್ʼ ಗೆ ತೋನ್ಸೆಯ ಪ್ರಕೃತಿ ಶಮನ ಮತ್ತು ಆಯುರ್ವೇದ ಆಸ್ಪತ್ರೆ 'ತೋನ್ಸೆ ಹೆಲ್ತ್ ಸೆಂಟರ್' ನ ಅಧ್ಯಕ್ಷ ಬಿ.ಎಂ.ಝಫರ್ ಪಾತ್ರರಾಗಿದ್ದಾರೆ.
2021ನೇ ಸಾಲಿನ ಪ್ರಶಸ್ತಿಗೆ ಬಿ.ಎಂ. ಝಫರ್ ಭಾಜನರಾಗಿದ್ದು, ಅವರು ನೀಡಿದ ಕೊಡುಗೆಗಳಿಗೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಬಿ.ಎಂ.ಝಫರ್ ಅವರು ಕಿದ್ಮತ್ ಕಮಿಟಿ, ಹೂಡೆ ಸ್ಥಾಪಕ ಕಾರ್ಯದರ್ಶಿ, ಯಂಗ್ ಮೆನ್ಸ್ ಅಸೋಸಿಯೇಶನ್ ಕೆಮ್ಮಣ್ಣು ಸಂಸ್ಥಾಪಕ ಕ್ರೀಡಾ ಕಾರ್ಯದರ್ಶಿ, ಸರಕಾರಿ ಉರ್ದು ಶಾಲೆ ಹೂಡೆ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ, ತೋನ್ಸೆ ಕಲ್ಚರಲ್ ಅಸೋಸಿಯೇಶನ್ ಯುಎಇ ಸ್ಥಾಪಕರಾಗಿದ್ದಾರೆ.