ಕಾಸರಗೋಡು :ಕೊರೋನ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಒಂದೂವರೆ ವರ್ಷ ಬಳಿಕ ಪುನರಾರಂಭ

Update: 2021-11-01 09:43 GMT

ಕಾಸರಗೋಡು : ಕೊರೋನ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಒಂದೂವರೆ ವರ್ಷಗಳ ಬಳಿಕ ಪುನರಾರಂಭಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಬರುತ್ತಿದೆ. ಕೋವಿಡ್ ಮಾರ್ಗ ಸೂಚಿಯಂತೆ ಶಾಲೆಗಳು ಪುನರಾರಂಭಗೊಂಡಿವೆ.

18 ತಿಂಗಳ ಬಳಿಕ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಶಾಲಾ ಆಡಳಿತ ಸಮಿತಿ, ಶಿಕ್ಷಕರು ಹಾಗೂ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸ್ವಾಗತಿಸಲಾಯಿತು.

ಒಂದರಿಂದ 7 ಮತ್ತು 10ನೇ ತರಗತಿ ನವಂಬರ್ ಒಂದರಿಂದ ಹಾಗೂ 8 ಮತ್ತು 9ನೇ ತರಗತಿಗಳು ನವಂಬರ್ 15 ರಿಂದ ಆರಂಭಗೊಳ್ಳಲಿದೆ. ಮೊದಲ 15 ದಿನ ಮಧ್ಯಾಹ್ನ ತನಕ ತರಗತಿ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ ಒಂದು ಗಂಟೆ ತನಕ ತರಗತಿ ನಡೆಯಲಿದೆ. ಒಂದು ಬಾರಿ 50 ಶೇಕಡಾ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇದಕ್ಕಾಗಿ ಎರಡು ಬ್ಯಾಚ್ ಗಳನ್ನು ಮಾಡಲಾಗಿದೆ. ಮೊದಲ ಬ್ಯಾಚ್ ನ ತರಗತಿ ಸೋಮವಾರದಿಂದ ಬುಧವಾರ ಹಾಗೂ ಎರಡನೇ ಬ್ಯಾಚ್ ನ ತರಗತಿ ಗುರುವಾರದಿಂದ ಶನಿವಾರ ತನಕ ನಡೆಯಲಿದೆ.

ವಿದ್ಯಾರ್ಥಿಗಳು ಶಾಲೆಗೆ ತಲಪಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ . ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ವಾಹನ ಚಾಲಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು  ಇದಲ್ಲದೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News