ನಮ್ಮ ನಾಡ ಒಕ್ಕೂಟ ಕಾಪು ಘಟಕ ವತಿಯಿಂದ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಶಿಬಿರ

Update: 2021-11-01 11:03 GMT

ಕಾಪು: ನಮ್ಮ ನಾಡ ಒಕ್ಕೂಟ ಕಾಪು ಘಟಕ ಮತ್ತು ಕಾಪು ಮಲ್ಲಾರಿನ ಖದೀಮ್ ಜಾಮಿಯ ಮಸೀದಿ ವತಿಯಿಂದ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ಶಿಬಿರವು ಒಕ್ಕೂಟದ ತಾಲೂಕು ಅಧ್ಯಕ್ಷ ಅಶ್ರಫ್ ಪಡುಬಿದ್ರಿ ಅಧ್ಯಕ್ಷತೆಯಲ್ಲಿ ಕಾಪು ಮಲ್ಲಾರ್ ಖದೀಮ್ ಜಾಮಿಯ ಮಸೀದಿಯ ಆವರಣದಲ್ಲಿ  ರವಿವಾರ ನಡೆಯಿತು.

ಕಾಯಕ್ರಮದ ಅಧ್ಯಕ್ಷತೆಯನ್ನು ಖಾದಿಮ್ ಜಾಮಿಯಾ ಮಸ್ಜಿದ್ ಮಲ್ಲಾರು ಇದರ ಅಧ್ಯಕ್ಷ ಶಾಬು ಸಾಹೇಬ್  ವಹಿಸಿದರು. ಮಲ್ಲಾರು ಜಾಮಿಯಾ ಮಸೀದಿಯ ಮೌಲಾನ ಫಯಾಝ್ ಆಲಂ ಕಿರಾಅತ್ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಕಾಪು ಘಟಕದ ಜೊತೆ ಕಾರ್ಯದರ್ಶಿ ಸನಾವರ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಕಾಪು ತಾಲೂಕು ಅಧ್ಯಕ್ಷ  ಅಶ್ರಫ್ ಪಡುಬಿದ್ರಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಡಾ. ತೇಜಸ್ವಿನಿ ಎ. (ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಉಡುಪಿ) ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ  ವಿವರವಾಗಿ ಹೇಳಿದರು. ಮಲ್ಲಾರು ಖದೀಮ್ ಜಾಮಿಯಾ ಮಸ್ಜಿದ್ ಅಧ್ಯಕ್ಷ ಶಾಬು ಸಾಹೇಬ್ ವಂದಿಸಿದರು.

ಈ ಸಂದರ್ಭ ಖದೀಮ್ ಜುಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಝುಬೈರ್, ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಉಪಾಧ್ಯಕ್ಷ ಮೊಹಮ್ಮದ್ ಇರ್ಫಾನ್ ಹಾಗೂ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಹುಸೈನ್ (SAMPARK SERVICES) ಮೂಳೂರು, ಕಮಿಟಿ ಮೆಂಬರ್ ಮೊಹಮ್ಮದ್ ಸಾದಿಕ್ ದಿನಾರ್, ಖಜಾಂಜಿ ಅಷ್ಫಾಕ್ ಮುಜಾವರ್, ಜಮಾಅತುಲ್ ಫಲಾಹ್ ಉಡುಪಿ ಮತ್ತು ದಕ್ಷಿಣ ಕನ್ನಡ ಇದರ ಅಧ್ಯಕ್ಷ ಶಬಿ ಅಹ್ಮದ್ ಖಾಝಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಸೀದಿ ಆಡಳಿತ ಮಂಡಳಿಯ ಸದಸ್ಯರು, ಜಮಾತ್ ಸದಸ್ಯರು ಹಾಗೂ ಕಾಪು ಘಟಕದ ಸದಸ್ಯರುಗಳು ಉಪಸ್ಥಿತರಿದ್ದರು. 

ಸ್ಥಳೀಯ ಸುಮಾರು 300 ಮಂದಿ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News