×
Ad

ಕನ್ನಡ ಮಾತನಾಡಲು ಪ್ರೇರಣೆ: ಪ್ರತಿಜ್ಞಾ ವಿಧಿ ಸ್ವೀಕಾರ

Update: 2021-11-01 20:49 IST

ಉಡುಪಿ, ನ.1: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಶಿಕ್ಷಣ ಇಲಾಖೆಯ ಎಲ್ಲ ಮೇಲ್ವಿಚಾರಣಾಧಿಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಉಡುಪಿ ಜಿಲ್ಲೆಯಲ್ಲಿ 1-10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪಾಠ ಬೋಧನೆ ಮಾಡುತ್ತಿರುವ ಜಿಲ್ಲೆಯ ಎಲ್ಲರೂ ಶಿಕ್ಷಕರುಗಳು ಶಾಲೆ ಮತ್ತು ಮನೆಯಲ್ಲಿ ಶುದ್ಧ ಕನ್ನಡವನ್ನು ಮಾತನಾಡುವಂತೆ ಪ್ರೇರೇಪಿಸ ಬೇಕೆಂದು ಪ್ರತಿಜ್ಞೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News