×
Ad

ಕನ್ನಡಕ್ಕೆ ಸಾಂಸ್ಕೃತಿಕ ಚಳವಳಿ ಅಗತ್ಯ: ಜಯನ್ ಮಲ್ಪೆ

Update: 2021-11-01 21:02 IST

ಮಲ್ಪೆ, ನ.1: ಕನ್ನಡಕ್ಕೆ ಬೇಕಾಗಿರುವುದು ಎಲ್ಲರನ್ನು ತನ್ನೊಳಗೆ ತುಂಬಿಸಿಕೊಂಡು ಹೊಸ ಸಾಂಸ್ಕೃತಿಕ ಆಯಾಮವನ್ನು ಕೊಡಬಲ್ಲ ಅರ್ಥಪೂರ್ಣ ಚಳವಳಿಯೇ ಹೊರತು ಆವೇಶ ಭರಿತ ಹೋರಾಟವಲ್ಲ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಮಲ್ಪೆ ಆಟೋ ಚಾಲಕರ ಮಾಲಕರ ಸಂಘ ಮಲ್ಪೆಯ ಬೀಚ್ ಬಳಿ ಆಯೋಜಿಸಲಾದ 66 ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಮಾಜಿ ನಗರಸಭಾ ಸದಸ್ಯ ಪಾಂಡುರಂಗ ಮಾತನಾಡಿದರು. ಈ ಸಂದರ್ಭದಲ್ಲಿ ಅಟೋ ಯ್ಯೂನಿಯನ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಗೌರವ ಅಧ್ಯಕ್ಷ ಚಂದ್ರಹಾಸ, ಅಶೋಕ್ ಮೆಂಡನ್, ವಾಸು ಅಮೀನ್, ಸುರೇಶ್ ತೊಟ್ಟಂ, ಪ್ರಕಾಶ್ ಕೊಡವೂರು, ಭರತ್ ಕೊಡವೂರು, ಶಬೀರ್ ಅಖಿಲ್, ರೋಷನ್, ರೆಹಮಾನ್, ಮಧುಕರ್, ಶ್ಯಾಮಣ್ಣ, ಚಿನ್ನಪ್ಪ ಕೊಟ್ಯಾನ್, ಯತೀಶ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

ದಿನೇಶ್ ಗಾಣಿಗ ಸ್ವಾಗತಿಸಿ, ಗಣೇಶ್ ಅಮೀನ್ ಬೈಲಕೆರೆ ವಂದಿಸಿದರು. ಭಗವಾನ್ ಮಲ್ಪೆಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮಾರು 500ಕ್ಕೂ ಹೆಚ್ಚು ಆಟೋ ರಿಕ್ಷಾಗಳು ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರೆವಣಿಗೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News