ಕನ್ನಡ ಶಿಕ್ಷಕಿಗೆ ಮನೆಯಲ್ಲಿಯೇ ರಾಜ್ಯೋತ್ಸವ ಗೌರವ

Update: 2021-11-01 15:33 GMT

ಶಿರ್ವ, ನ.1: ಮೂಡುಬೆಳ್ಳೆ ಚರ್ಚ್ ಶಾಲೆಯಲ್ಲಿ ಸುಮಾರು 30ವರ್ಷಕೂ ಅಧಿಕ ಕಾಲ ಒಂದನೇ ತರಗತಿಯಲ್ಲಿ ಕನ್ನಡ ಅಕ್ಷರ ಗಳನ್ನು ವಿಶಿಷ್ಟ ರೀತಿಯಲ್ಲಿ ಕಲಿಸಿ ಅಂದಿನ ವಿದ್ಯಾರ್ಥಿಗಳಿಗೆ ಕನ್ನಡದ ಕಂಪನ್ನು ಜಾಗೃತಗೊಳಿಸಿರುವ 78ರ ಹರೆಯದ ಲೀನಾ ಟೀಚರ್ (ಲೀನಾ ಡಿ.ಅಲ್ಮೇಡಾ) ಅವರನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಳೆವಿದ್ಯಾರ್ಥಿ ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ ಮುಂದಾಳತ್ವದಲ್ಲಿ ಮನೆಯಲ್ಲಿಯೇ ಗೌರವಿಸಲಾಯಿತು.

ಈ ಸಂದರ್ದಲ್ಲಿ ಕಾಪು ತಾಲೂಕು ಕಸಾಪ ನಿಕಟಪೂರ್ವಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ಸಂತ ಲಾರೆನ್ಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಡ್ವರ್ಡ್ ಲಾರ್ಸನ್ ಡಿಸೋಜ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಶುಭ ಹಾರೈಸಿದರು.

ಗ್ರಾಪಂ ಉಪಾಧ್ಯಕ್ಷೆ ಸಂಧ್ಯಾ ಎಂ.ಶೆಟ್ಟಿ, ಕಾಪು ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್, ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಲೇಖಕ ಆರ್‌ಡಿ ಪಾಂಬೂರು, ಸಮಾಜ ಸೇವಕಿ ಎಲಿಜಬೆತ್ ಐಡಾ ಡಿಅಲ್ಮೇಡಾ ಮೊದಲಾದವರು ಉಪಸ್ಥಿತರಿದ್ದರು.

ಅಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News