ಕಂಕನಾಡಿ: ನೂತನ ಬಸ್ಸು ನಿಲ್ದಾಣ ಉದ್ಘಾಟನೆ

Update: 2021-11-01 15:37 GMT

ಮಂಗಳೂರು, ನ.1: ನಗರದ ಫಾದರ್ ಮುಲ್ಲರ್ಸ್‌ ಚಾರಿಟೇಬಲ್ ಇನ್‌ಸ್ಟಿಟ್ಯೂನ್‌ನ ಮೆಡಿಕಲ್ ಕಾಲೇಜ್ ವತಿಯಿಂದ ನಿರ್ಮಿಸಲ್ಪಟ್ಟ ಕಂಕನಾಡಿ ನೂತನ ಬಸ್ ತಂಗುದಾಣ ಉದ್ಘಾಟನಾ ಸಮಾರಂಭ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಫಾದರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜು ಆವರಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ನೂತನ ಬಸ್ ತಂಗುದಾಣ ಉದ್ಘಾಟನೆಯನ್ನು ಮಂಗಳೂರು ಮನಪ ಮಹಾ ಪೌರರಾದ ಪ್ರೇಮನಂದ್ ಶೆಟ್ಟಿ ನೆರವೇರಿಸಿ, ಫಾಧರ್ ಮುಲ್ಲರ್ಸ್‌ ಸಂಸ್ಥೆಯು ಸ್ಮಾರ್ಟ್ ಸಿಟಿಯಾಗಿ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ನಗರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತಾ ಬಂದಿರುವುದಾಗಿ ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ ಅವರು ನೂತನ ಬಸ್ಸು ನಿಲ್ಟಾಣದ ಆರ್ಶೀವಚನ ನೆರವೇರಿಸಿದರು.

ಬಳಿಕ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಈ ವೇಳೆ ನಗರ ಮಾತ್ರವ ಲ್ಲದೆ ಜಿಲ್ಲೆಗೆ ರಾಜ್ಯದ ಜನರಿಗೆ ಫಾದರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜು ನೀಡುವ ಸೇವೆ ಅಭೂತಪೂರ್ವ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ಮನಪ ಸದಸ್ಯರಾದ ನವೀನ್ ಡಿಸೋಜ, ಜೆಸಿಂತ ವಿಜಯ್ ಆಲ್ಪ್ರೆಡ್, ಫಾದರ್ ಮುಲ್ಲರ್ಸ್‌ ಸಮೂಹ ಸಂಸ್ಥೆಗಳ ನಿರ್ದೇಶಕ ವಂ. ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತ ಅಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜು ಆಡಳಿತ ಅಧಿಕಾರಿ ಫಾ. ಅಜಿತ್ ಮಿನೇಜಸ್, ಫಾದರ್ ಮುಲ್ಲರ್ಸ್‌ ತುಂಬೆ ಆಡಳಿತ ಅಧಿಕಾರಿ ಫಾ. ವಿನ್ಸೆಂಟ್, ಫಾದರ್ ಮುಲ್ಲರ್ಸ್‌ ಹೋಮಿಯೋಪತಿ ಕಾಲೇಜಿನ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ಸಿಸ್ಟರ್ ಜೆಸಿಂತಾ, ಫಾಧರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜಿನ ಡೀನ್ ಡಾ. ಜೆ. ಪಿ ಆಳ್ವ, ಡಾ. ಸಂಜೀವ ರೈ, ಗವರ್ನಿಂಗ್ ಬಾಡಿ ಸದಸ್ಯರಾದ ಜೋನ್ ಎಡ್ವರ್ಡ್ ಡಿಸಿಲ್ವ, ಎಂ.ಪಿ. ನೊರೊನ್ಹಾ, ಗುತ್ತಿಗೆದಾರರಾದ ಸಂದೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News