ಪುತ್ತೂರು: ಭಾಷಾ ಜಾಗೃತಿಗಾಗಿ ಕೆಸ್ಸಾರ್ಟಿಸಿಯಿಂದ ಕನ್ನಡದ ತೇರು ಸಂಚಾರ

Update: 2021-11-01 15:51 GMT

ಪುತ್ತೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾಷಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ಕೆಸ್ಸಾರ್ಟಿಸಿ ಘಟಕದ ವತಿಯಿಂದ ಕೆಸ್ಸಾರ್ಟಿಸಿ ಬಸ್ಸೊಂದು ಸಿಂಗಾರಗೊಂಡು ಸೋಮವಾರ ನಗರದಾದ್ಯಂತ ಓಡಾಟ ನಡೆಸಿ ಕನ್ನಡದ ಕಂಪನ್ನು ಮೂಡಿಸಿತು.

ಕನ್ನಡ ತೇರು ಬಸ್ಸು ಪುತ್ತೂರಿನ ಸಂಪ್ಯದಿಂದ ಆರಂಭಗೊಂಡು ನಗರ ಸಭಾ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ಕೆಎಸ್ಸಾರ್ಟಿಸಿ ಘಟಕಕ್ಕೆ ಆಗಮಿಸಿತ್ತು. ಬಸ್ಸಿನಲ್ಲಿ ಧ್ವನಿವರ್ಧಕ ಅಳವಡಿಸಿ ಕನ್ನಡ ಹಾಡುಗಳನ್ನು ಬಿತ್ತರಿಸಲಾಯಿತು. 

ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ ಕನ್ನಡ ತೇರನ್ನು ಉದ್ಘಾಟಿಸಿದರು. ಕೆಎಸ್‍ಆರ್‍ಟಿಸಿ ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರು ವಿಶೇಷ ಆಸಕ್ತಿ ವಹಿಸಿ ಈ ಕನ್ನಡ ತೇರು ಸಂಚಾರವನ್ನು ವ್ಯವಸ್ಥೆಗೊಳಿಸಿದ್ದರು. 

ಪುತ್ತೂರು ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಕನ್ನಡ ಭಾಷಾ ಪ್ರೇಮಿಯಾಗಿದ್ದು ಪ್ರತೀದಿನ ಬೆಳಗ್ಗೆ ಘಟಕದಲ್ಲಿ ನಾಡಗೀತೆಯನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಜೊತೆಗೆ ಆಗಾಗ ಕನ್ನಡ ಕವಿಗಳ ಭಾವಗೀತೆ ಗಳ ಕೂಡಾ ಘಟಕದಲ್ಲಿ ಬಿತ್ತರಗೊಳ್ಳುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News