×
Ad

ಸಿಡಿಲು ಬಡಿದು ಯುವಕ ಮೃತ್ಯು ಘಟನೆ: ಮೃತನ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ

Update: 2021-11-01 21:34 IST

ಕೊಣಾಜೆ:  ಸಿಡಿಲು ಬಡಿದು ಮೃತಪಟ್ಟ ಹರೇಕಳ ಗಾಣದಬೆಟ್ಟು ನಿವಾಸಿ ಅಬ್ದುಲ್ ರಹ್ಮಾನ್  ಅವರ ಕುಟುಂಬಕ್ಕೆ ಸರ್ಕಾರದಿಂದ ದೊರಕುವ ಪರಿಹಾರ ಧನದ ಐದು ಲಕ್ಷ ರೂ. ಚೆಕ್ ಸೋಮವಾರ ಶಾಸಕ ಯು.ಟಿ.ಖಾದರ್ ಮೃತನ ತಂದೆ ಜಿ.ಎಸ್.ಹಸನಬ್ಬ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ತಾಲೂಕು ಪಂ. ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್‌ ನಗರ, ಆಲಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಪಂಜಿಮಾಡಿ, ಡಿವೈಎಫ್‌ಐ ಉಳ್ಳಾಲ ವಲಯಾಧ್ಯಕ್ಷ ರಫೀಕ್ ಹರೇಕಳ, ಪಂಚಾಯಿತಿ ಸದಸ್ಯರಾದ ಎಂ.ಪಿ.ಅಬ್ದುಲ್ ಮಜೀದ್, ಅಬ್ದುಲ್ ಸತ್ತಾರ್ ಬಾವಲಿಗುರಿ, ಮಹಮ್ಮದ್ ರಫೀಕ್, ಕಂದಾಯ ನಿರೀಕ್ಷಕ ಪ್ರಸಾದ್, ಗ್ರಾಮಕರಣಿಕೆ ಅಕ್ಷತಾ, ಮುಖಂಡರಾದ ಝಕರಿಯಾ ಮಲಾರ್, ಉಮರಬ್ಬ, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಮುಸ್ತಫಾ, ಮಿಸ್ಬಾಹ್, ಖಲೀಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News