×
Ad

ಕೆದಿಲ - ಪಾಟ್ರಕೋಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮುಂಜಾಗ್ರತಾ ಮಾಹಿತಿ ಶಿಬಿರ

Update: 2021-11-01 22:58 IST

ವಿಟ್ಲ :  ಕೆದಿಲ - ಪಾಟ್ರಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿ, ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕ್ಯಾನ್ಸರ್ ಖಾಯಿಲೆಯ ಬಗ್ಗೆ ಮುಂಜಾಗ್ರತಾ ಮಾಹಿತಿ ಶಿಬಿರ  ಹಾಗೂ ಔಷಧ ವಿತರಣಾ ಕಾರ್ಯಕ್ರಮವು ರವಿವಾರ ಇಲ್ಲಿನ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು.

ಸಯ್ಯಿದ್ ಅಲ್ ಹಾದಿ ಹಂಝ ತಂಙಲ್ ಪಾಟ್ರಕೋಡಿ ದು:ಹಾಶೀರ್ವಚನಗೈದರು. ಪಾಟ್ರಕೋಡಿ ಎಂ.ಜೆ.ಎಂ. ಖತೀಬ್ ಶರೀಫ್ ಅಝ್ಅರಿ ಉದ್ಘಾಟಿಸಿದರು, ಪಾಟ್ರಕೋಡಿ ಎಂ.ಜೆ.ಎಂ. ಅದ್ಯಕ್ಷ ಇಸುಬು ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆದಂ ಕುಂಞಿ ಹಾಜಿ, ಕೆದಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಮುರುವ ಮಾತನಾಡಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ ಕೊಡಾಜೆ, ಪಾಟ್ರಕೋಡಿ ಎಂ.ಜೆ.ಎಂ. ಸದರ್ ಮುಅಲ್ಲಿಂ ಇಸ್ಮಾಯಿಲ್ ಸಅದಿ, ಮಾಜಿ ಅಧ್ಯಕ್ಷರುಗಳಾದ ಹಾಜಿ ಮುಹಮ್ಮದ್ ಮಾಸ್ಟರ್, ಹಾಜಿ ಅಬ್ದುಲ್ ಹಮೀದ್ ಕೋಡಿ, ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಹಬೀಬ್ ಮುಹ್ಸಿನ್ ಎಂ.ಎಚ್, ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಶೆಟ್ಟಿ, ಮಾಣಿ ಸೋಶಿಯಲ್ ಇಖ್ವಾ ಫೆಡರೇಷನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸುಲ್ತಾನ್, ಸಮಾಜಸೇವಕ ಮಾಧವ ಬಗಂಬಿಲ ದೇರಳಕಟ್ಟೆ, ಅಳಕೆಮಜಲು  ಜುಮಾ ಮಸೀದಿ ಕಾರ್ಯದರ್ಶಿ ಹಾಜಿ ಮುಹಮ್ಮದ್ ಕುಂಞಿ, ಪಾಟ್ರಕೋಡಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಪಿ.ನಿಶಾದ್, ಶರೀಫ್  ಪಾಟ್ರಕೋಡಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್ ಮೇನ್ ಯು.ಕೆ.ಮೋನು ಹಾಗೂ ಬಗ್ಗುಮೂಲೆ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಹನೀಫ್ ಬಗ್ಗುಮೂಲೆ ಅವರನ್ನು ಪಾಟ್ರಕೋಡಿ ಎಂ.ಜೆ.ಎಂ. ಕಾರ್ಯದರ್ಶಿ ಇಬ್ರಾಹಿಂ ಬಾತಿಶ್ ಅಭಿನಂದಿಸಿದರು.

ಕಣಚೂರು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಶೀದ್ ಉಜಿರೆ, ವೈದ್ಯರುಗಳಾದ ಡಾ. ಶ್ರೀಕಾಂತ್ ಹೆಗ್ಡೆ, ಡಾ.ಅಮೀನ್ ಬಾಸಿಲ್, ಡಾ. ಓನಿಯಲ್ ಫೆರ್ನಾಂಡಿಸ್ ಅವರು ಭಾಗವಹಿಸಿದ್ದ ಈ ಶಿಬಿರದಲ್ಲಿ 319 ಮಂದಿ ಪ್ರಯೋಜನವನ್ನು ಪಡೆದುಕೊಂಡರು.

ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಪಾಟ್ರಕೋಡಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಶನ್ ಕಾರ್ಯದರ್ಶಿ ನೌಶಾದ್ ಕೋಡಿ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿಗಳಾದ ಕೌಶಿತ ಸ್ವಾಗತಿಸಿ,  ಯಶೋದ ವಂದಿಸಿದರು. ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News