ರಸ್ತೆ ಅಪಘಾತ; ಗಾಯಾಳು ಮೃತ್ಯು
Update: 2021-11-01 23:06 IST
ಮಂಗಳೂರು, ನ.1: ಅಪಘಾತದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಮೃತರನ್ನು ಪ್ರಶಾಂತ ಎಂದು ಗುರುತಿಸಲಾಗಿದೆ.
ಅ.31ರಂದು ಪ್ರಶಾಂತ್ ಚಾಲಯಿಸುತ್ತಿದ್ದ ಬೈಕ್‌ಗೆ ಮಂಗಳೂರಿನ ಕೆಪಿಟಿ ಬಳಿ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಪ್ರಶಾಂತ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.