×
Ad

ಅಖಿಲ ಭಾರತ ನೀಟ್ ಫಲಿತಾಂಶ ಪ್ರಕಟ; ಮಂಗಳೂರಿನ ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಜಶನ್ ಛಾಬ್ರಾಗೆ 5ನೇ ರ‍್ಯಾಂಕ್

Update: 2021-11-01 23:26 IST
ಜಶನ್ ಛಾಬ್ರಾ - ಎಚ್.ಕೆ. ಮೇಘನ್

ಮಂಗಳೂರು, ನ.1: ಇಲ್ಲಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಜಶನ್ ಛಾಬ್ರಾ 720ರಲ್ಲಿ 715 ಅಂಕ ಪಡೆದು ಅಖಿಲ ಭಾರತ ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ನೀಡುವ ನೀಟ್ ಪರೀಕ್ಷೆಯ ಫಲಿಂತಾಶ ಸೋಮವಾರ ರಾತ್ರಿ ಹೊಸದಿಲ್ಲಿಯಲ್ಲಿ ಪ್ರಕಟಿಸಲಾಗಿದೆ.

ತೆಲಂಗಾಣ, ದಿಲ್ಲಿ ಹಾಗೂ ಮಹಾರಾಷ್ಟ್ರದ ತಲಾ ಓರ್ವ ವಿದ್ಯಾರ್ಥಿ 720ರಲ್ಲಿ 720 ಪಡೆದು ಮೊದಲ ಮೂರು ಸ್ಥಾನ ಪಡೆದಿದ್ದಾರೆ. 4ನೆ ಸ್ಥಾನವನ್ನು ಉತ್ತರ ಪ್ರದೇಶದ ವಿದ್ಯಾರ್ಥಿ (716) ಪಡೆದಿದ್ದು, ಮಂಗಳೂರಿನ ಜಶನ್ ಛಾಬ್ರಾ, ಮೈಸೂರಿನ ಪ್ರಮತಿ ಹಿಲ್ ವ್ಯೂವ್ ಅಕಾಡಮಿಯ ವಿದ್ಯಾರ್ಥಿ ಎಚ್.ಕೆ. ಮೇಘನ್ ಸಹಿತ 12 ವಿದ್ಯಾರ್ಥಿಗಳು 715 ಅಂಕ ಪಡೆದು 5ನೆ ರ‍್ಯಾಂಕ್ ಗಳಿಸಿದ್ದಾರೆ.

ಜಶನ್ ಛಾಬ್ರಾ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.2 ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ನೀಟ್‌ನಲ್ಲಿ 5ನೇ ರ‍್ಯಾಂಕ್ ಪಡೆಯುವ ಮೂಲಕ ಇದೀಗ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News