ಚಿನ್ನ ಕಳ್ಳಸಾಗಣೆ ಪ್ರಕರಣ: ಸ್ವಪ್ನಾ ಸುರೇಶ್‌ಗೆ ಜಾಮೀನು

Update: 2021-11-02 12:51 GMT
ANI Photo

ಕೊಚ್ಚಿ: ರಾಜತಾಂತ್ರಿಕ ವಾಹಿನಿಯ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ದಾಖಲಿಸಿದ್ದ ಯುಎಪಿಎ ಪ್ರಕರಣದಲ್ಲಿ ಸ್ವಪ್ನಾ ಸುರೇಶ್‌ಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

 ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಹಾಗೂ  ಸಿ. ಜಯಚಂದ್ರನ್ ಅವರ ಪೀಠವು ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರಲ್ಲದೆ ಇತರ ಆರೋಪಿಗಳಾದ ಮುಹಮ್ಮದ್ ಶಫಿ ಪಿ, ಜಲಾಲ್ ಎಎಂ, ರಾಬಿನ್ಸ್ ಹಮೀದ್, ರಮೀಸ್ ಕೆಟಿ, ಶರಫುದ್ದೀನ್ ಕೆಟಿ, ಸರಿತ್ ಪಿಎಸ್ ಹಾಗೂ ಮುಹಮ್ಮದ್ ಅಲಿ ಅವರಿಗೆ ಜಾಮೀನು ನೀಡಿದೆ.

ಜುಲೈ 5, 2020 ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿರುವ ಯುಎಇ ಕಾನ್ಸುಲೇಟ್‌ನ ರಾಜತಾಂತ್ರಿಕ ಸಾಮಾನು ಸರಂಜಾಮುಗಳಿಂದ 15 ಕೋಟಿ ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವುದರೊಂದಿಗೆ ಬೆಳಕಿಗೆ ಬಂದಿರುವ ಜಾಲವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಈಡಿ ಮತ್ತು ಕಸ್ಟಮ್ಸ್ ಪ್ರತ್ಯೇಕ ತನಿಖೆಗಳನ್ನು ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News