ಕನ್ನಡ ರಾಜ್ಯೋತ್ಸವ, ಗಾನಗಂಧರ್ವ ಡಾ.ಎಸ್.ಪಿ.ಬಿ ಹಾಡುಗಳ ಉತ್ಸವ

Update: 2021-11-02 13:45 GMT

ಉಡುಪಿ, ನ.2: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ, ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್, ಉಡುಪಿ ಸೃಷ್ಠಿ ಮ್ಯೂಸಿಕ್ ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಗಾನಗಂಧರ್ವ ಡಾ.ಎಸ್.ಪಿ.ಬಿ. ಹಾಡುಗಳ ಉತ್ಸವವನ್ನು ಮಲಬಾರ್ ಗೋಲ್ಡ್ ಉಡುಪಿ ಶಾಖೆುಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂಗಳೂರಿನ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಕೆ.ರವಿಶಂಕರ್ ಮಂಗಳೂರು ಅವರಿಗೆ ಈ ಸಾಲಿನ ಡಾ.ಎಸ್.ಪಿ.ಬಾಲ ಸುಬ್ರಹ್ಮಣ್ಯಂ ಪ್ರಶಸ್ತಿಯನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಪ್ರದಾನ ಮಾಡಿದರು. ಬ್ರಹ್ಮಾವರ ನ್ಯೂ ಬಿಲ್ಡರ್ಸ್‌ ಡೆವಲಪರ್ಸ್‌ ಸಂಸ್ಥೆಯ ಮುಖ್ಯಸ್ಥ ಚೇತನ್ ಕುಮಾರ್ ಶೆಟ್ಟಿ ಮಾತನಾಡಿದರು.

ಹೆಬ್ರಿ ಕ್ಯಾಂಪ್ರೋ ಸಂಸ್ಥೆಯ ಶಾಖಾ ಪ್ರಬಂಧಕ ರಮೇಶ್ ಡಿ.ಚಾಂತಾರು. ಉದ್ಯಮಿ ಹರೀಶ್ ಶ್ರೀಯಾನ್ ಮಲ್ಪೆ, ಉಡುಪಿ ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಅಧ್ಯಕ್ಷ ರಾಮ್ ವಿ.ಕುಂದರ್, ಮಲಬಾರ್ ಗೋಲ್ಡ್ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಹಫೀಝ್ ರಹ್ಮಾನ್, ದಿಶಾ ಕಮ್ಯೂನಿಕೇಷನ್ಸ್ ಸಂಸ್ಥೆಯ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ, ರಂಗಕಲಾವಿದ ಕಾಪು ಲೀಲಾಧರ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಹಮ್ಮದ್ ಫಾರೂಕ್ ಚಂದ್ರನಗರ, ರಾಘವೇಂದ್ರ ನಾಯಕ್ ಅಜೆಕಾರು, ಸಾಯಿ ಈಶ್ವರ್ ಟಿವಿಯ ಪ್ರಸಾದ್ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದರ್ಭ ಮಿಸೆಸ್ ಇಂಡಿಯಾ ಕರ್ನಾಟಕ ಪ್ರಶಸ್ತಿ ವಿಜೇತೆ ವಿದ್ಯಾ ಸರಸ್ವತಿ ಉಡುಪಿ ಮತ್ತು ಮಿಸ್ ಇಂಡಿಯಾ ಗ್ಲೋಬಲ್ ಕರ್ನಾಟಕ ಸೆಮಿಫೈನಲಿಸ್ಟ್ ಕುಮಾರಿ ಪ್ರಶಾ ಸುವರ್ಣ ಪಿತ್ರೋಡಿ ಅವರಿಗೆ ವಿಶೇಷ ಸಾಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಸಂಯೋಜಕ ದಯಾನಂದ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಉಪನ್ಯಾಸಕ ದಯಾನಂದ್ ಕೆ. ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಶೇರಿಗಾರ್ ವಂದಿಸಿದರು. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರವರಿಗೆ ಸಂಗೀತ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಷ್ಠಿ ಮ್ಯೂಸಿಕ್ ಅಕಾಡೆಮಿ ಕಲಾವಿದರಿಂದ ಎಸ್.ಬಿ.ಬಿ ಹಾಡುಗಳ ರಸಮಂಜರಿ ಹಾಗೂ ಮಾಸ್ಟರ್ ಯಶಸ್ ಪಿ.ಸುವರ್ಣ ಅವರಿಂದ ಕೊಳಲು ವಾದನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News