ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ

Update: 2021-11-02 13:46 GMT

ಉಡುಪಿ, ನ.2: ವಾಕೊ ಕರ್ನಾಟಕ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ನ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಕ್ಯಾಡೆಟ್ ವಿಭಾಗಗಳಲ್ಲಿ ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನ ವಿದ್ಯಾರ್ಥಿಗಳಾದ ಉತ್ತೇಜ್, ಅಮೃತ, ಸ್ವರ್ಣ ಹಾಗೂ ದ್ರುವ ಎಸ್.ಪೂಜಾರಿ ಒಟ್ಟು 4 ಚಿನ್ನ, 6 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಪದಕ ವಿಜೇತ ವಿದ್ಯಾರ್ಥಿಗಳನ್ನು ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಹಾಗೂ ಅಸೋಸಿಯೇಷನ್ ಗೌರವಾಧ್ಯಕ್ಷ ಡಾ.ನೀ.ಬಿ. ವಿಜಯ ಬಲ್ಲಾಳ್, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅಭಿನಂದಿಸಿದರು. ಈ ಸಂದರ್ಭದಲ್ಲಿ ನಗರ ಠಾಣೆಯ ಎಸ್ಸೈ ವಾಸಪ್ಪ ನಾಯ್ಕ್, ಪ್ರೊಬೆಶನರಿ ಎಸ್ಸೈಗಳಾದ ಪ್ರಸಾದ್, ಸುಹಾಸ್, ಎಎಸ್ಸೈ ನಾರಾಯಣ, ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಾಮನ್ ಪಾಲನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News