×
Ad

ಟೆಕ್ನಿಶಿಯನ್‌ ನಾಪತ್ತೆ

Update: 2021-11-02 22:19 IST

ಮಂಗಳೂರು, ನ.2: ಮಂಗಳೂರು ಕೇಂದ್ರ ರೈಲ್ವೆಯ ಇಲೆಕ್ಟ್ರಿಕಲ್ ಘಟಕದಲ್ಲಿ ಸುಮಾರು 8 ವರ್ಷಗಳಿಂದ ಹಿರಿಯ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಎಕ್ಕೂರು ಸಮೀಪದ ಬಾಡಿಗೆ ಮನೆ ನಿವಾಸಿ ಶಿಜು (43) ಎಂಬವರು ಅ.26ರಂದು ಕೆಲಸಕ್ಕೆ ಹೋದವರು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು 6.2 ಅಡಿ ಎತ್ತರವಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್, ಬೂದು ಬಣ್ಣದ ಟೀ ಶರ್ಟ್ ಧರಿಸಿದ್ದರು. ಮಲಯಾಳಂ, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ. ಮಾಹಿತಿ ದೊರೆತವರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News