ಪಾಕ್: ನಿಷೇಧಿತ ಟಿಟಿಪಿ ಸಂಘಟನೆಯ 4 ಉಗ್ರರ ಹತ್ಯೆ
Update: 2021-11-02 23:18 IST
ಇಸ್ಲಮಾಬಾದ್, ನ.2: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಸಂಘಟನೆಗೆ ಸೇರಿದ 4 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಖೈಬರ್ ಪಖ್ತುಂಕ್ವಾ ಪ್ರಾಂತದ ಹಂಗು ಜಿಲ್ಲೆಯ ಥಾಲ್ ತಾಲೂಕಿನಲ್ಲಿ ಶಂಕಿತ ಉಗ್ರರ ಬಗ್ಗೆ ದೊರೆತ ಮಾಹಿತಿಯನ್ವಯ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತ ಉಗ್ರರು ಟಿಟಿಪಿ ಸಂಘಟನೆಯ ಸದಸ್ಯರು ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಯಾಚರಣೆಯ ಸಂದರ್ಭ ಇನ್ನೂ ಕೆಲವು ಉಗ್ರರು ಸಮೀಪದ ಅರಣ್ಯಕ್ಕೆ ಓಡಿದ್ದು ಅವರ ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.