×
Ad

ಸ್ಕಾಟ್ಲೆಂಡ್‌: ಭಾರತೀಯರನ್ನು ಭೇಟಿಯಾಗಿ, ಡ್ರಮ್ಸ್ ಬಾರಿಸಿದ ಪ್ರಧಾನಿ ಮೋದಿ

Update: 2021-11-03 10:54 IST

ಗ್ಲಾಸ್ಗೋ: ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಲು  ಗ್ಲಾಸ್ಗೋಗೆ ಎರಡು ದಿನಗಳ ಭೇಟಿಯ ನಂತರ ಭಾರತಕ್ಕೆ ಹೊರಡುವ ಮೊದಲು ವಿದಾಯ ಹೇಳಲು ಜಮಾಯಿಸಿದ ಸ್ಕಾಟ್ಲೆಂಡ್‌ನಲ್ಲಿರುವ ಹಲವಾರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಬೆರತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಡ್ರಮ್ಸ್ ಬಾರಿಸುತ್ತಾ ಸಂಗೀತ ಮೇಳದ ತಾಳದೊಂದಿಗೆ ಬೆರೆತರು .

ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಂತೆ ಲಯಬದ್ಧವಾದ ಡ್ರಮ್ಮಿಂಗ್ ಮತ್ತು ಉತ್ಸಾಹಭರಿತ ಹರ್ಷೋದ್ಗಾರಗಳ ಧ್ವನಿಯಿಂದ ಅವರನ್ನು ಸ್ವಾಗತಿಸಲಾಯಿತು. ಅಪಾರ ಸಂಖ್ಯೆಯ ಜನರು  ಭಾರತೀಯ ಸಾಂಪ್ರದಾಯಿಕ ಉಡುಗೆ ಹಾಗೂ  ಪೇಟಗಳನ್ನು ಧರಿಸಿದ್ದರು. ಮೋದಿ ಅವರು ಭಾರತಕ್ಕೆ ಹೊರಡುವ ಮೊದಲು ಅವರಿಗೆ ವಿದಾಯ ಹೇಳಲು ಜಮಾಯಿಸಿದರು.

ಮೋದಿ ಅವರು ನೆರೆದಿದ್ದ ಭಾರತೀಯರ ಹಸ್ತಲಾಘವ ಮಾಡುವುದರ ಜೊತೆಗೆ  ಸಂಗೀತ ಮೇಳದೊಂದಿಗೆ ಸೇರಿ ಡ್ರಮ್ಸ್ ಬಾರಿಸಿ ಅವರನ್ನು ಹುರಿದುಂಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News