×
Ad

ಉಚಿತ ತರಬೇತಿಗೆ ಅರ್ಜಿ ಆಹ್ವಾನ

Update: 2021-11-03 20:22 IST

ಮಣಿಪಾಲ, ನ.3: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇಲ್ಲಿ 10 ದಿನಗಳ ಉಚಿತ ಆರಿ ಎಂಬ್ರಾಯ್ಡರಿ ವರ್ಕ್ಸ್ ತರಬೇತಿ ಯನ್ನು ಆಯೋಜಿಸ ಲಾಗಿದೆ. ಸ್ವ-ಸಹಾಯ ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಪೂರಕ ತರಬೇತಿಯನ್ನು ನೀಡುವ ಉದ್ದೇಶದಿಂದ ಇದನ್ನು ಆಯೋಜಿಸಲಾಗುತ್ತಿದೆ.

ತರಬೇತಿಯು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ. 18ರಿಂದ 45 ವರ್ಷ ವಯೋಮಿತಿಯವರು ಈ ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಈ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಮಾತ್ರ ಆದ್ಯತೆ ನೀಡಲಾಗುವುದು.

ತರಬೇತಿಗೆ ಸೀಮಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ತಕ್ಷಣವೇ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬೇಕೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಜಿಯನ್ನು ಕಳುಹಿಸುವ ವಿಳಾಸ ಭಾರತಿಯ ವಿಕಾಸ ಟ್ರಸ್ಟ್, ಅನಂತ ಅಂಬಾಗಿಲು ಮಣಿಪಾಲ ರಸ್ತೆ, ಉಡುಪಿ-576102. ದೂರವಾಣಿ ಸಂಖ್ಯೆ : 0820-2570263.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News